ಆಂಧ್ರ ಸರ್ಕಾರದಿಂದ ಫೋನ್ ಕದ್ದಾಲಿಕೆ, ಪಿಎಂಗೆ ಟಿಡಿಪಿ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಆಂದ್ರಪ್ರದೇಶ,ಆ.17- ಆಂಧ್ರಪ್ರದೇಶ ಸರ್ಕಾರವು ಕೆಲವು ವಕೀಲರು, ಮಾಧ್ಯಮದವರನ್ನು ಮತ್ತು ಸಾಮಾಜಿಕ ಕಾರ್ಯಕರ್ತರ ಫೋನ್‍ಗಳನ್ನು ಕದ್ದಾಲಿಕೆ ಮಾಡುತ್ತಿದೆ ಇದು ಸಂವಿಧಾನದ ಮೂಲಭೂತ ಹಕ್ಕುಗಳ 19 ಮತ್ತು 21ನೇ ವಿಗಳ ಉಲ್ಲಂಘನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ವೈ.ಎಸ್.ಜಗಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆದಿರುವ ಅವರು, ವೈಎಸ್‍ಆರ್‍ಪಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಕಾನೂನುಬಾಹಿರವಾಗಿ ದೂರವಾಣಿ ಕರೆಗಳನ್ನು ಟ್ಯಾಪ್ ಮಾಡುತ್ತಿದೆ ಎಂದು ದೂರಿದ್ದಾರೆ.

ಜಗನ್ ಮೋಹನ್ ರೆಡ್ಡಿ ಸರ್ಕಾರವು ಅಕ್ರಮ ಸಾಫ್ಟ್‍ವೇರ್‍ನ್ನು ಬಳಸುತ್ತಿದೆ. ಇಂತಹ ಅತ್ಯಾಧುನಿಕ ತಂತ್ರಜ್ಞಾನವು ವ್ಯಕ್ತಿಗಳ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವುದಲ್ಲದೆ, ಬ್ಲ್ಯಾಕ್ಮೇಲ್ ಬೆದರಿಕೆಗಳಿಗೆ ಒಳಪಡಿಸುವ ಮೂಲಕ ರಾಜಿ ಗೊಳಪಸುವ ತಂತ್ರ ಅನುಸರಿಸುತ್ತಿದೆ. ಭವಿಷ್ಯದಲ್ಲಿ ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಬಹುದು.

ಇಂತಹ ಅಕ್ರಮ ಫೋನ್ ಟ್ಯಾಪಿಂಗ್‍ನ್ನು ಪರಿಶೀಲಿಸದೆ ಹೋದರೆ ರಾಷ್ಟ್ರದ ಸಮಗ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
.

Facebook Comments

Sri Raghav

Admin