ಚಂದ್ರಮಾನ-2 ಉಡಾವಣೆಗೆ ಕೌಂಟ್‍ಡೌನ್ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀಹರಿಕೋಟಾ, ಜು.21- ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಭಾರತದ ಮಹಾತ್ವಾಕಾಂಕ್ಷಿ ಚಂದ್ರಯಾನ -2 ಗಗನನೌಕೆ ನಾಳೆ ಮಧ್ಯಾಹ್ನ 2.43ಕ್ಕೆ ಉಡಾವಣೆಯಾಗಲಿದೆ. ನಾಳೆ ನಡೆಯಲಿರುವ ಉಡ್ಡಯನಕ್ಕಾಗಿ ಪೂರ್ವಭಾವಿ ಪ್ರಯೋಗಗಳು ಯಶಸ್ವಿಯಾಗಿದ್ದು, ಚಂದ್ರಯಾನ-2 ಇಂದು ಸಂಜೆಯಿಂದ ಕ್ಷಣಗಣನೆ ಆರಂಭವಾಗಿದೆ.

ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಜು.15ರ ನಸುಕಿನಲ್ಲಿ ನಭಕ್ಕೆ ನೆಗೆಯಬೇಕಿದ್ದ ಜಿಎಸ್‍ಎಲ್‍ವಿ-ಎಂಕೆ 3 ರಾಕೆಟ್, ನಾಳೆ ಮಧ್ಯಾಹ್ನ ಉಡಾವಣೆಗೊಳ್ಳಲಿದೆ. ಈ ರಾಕೆಟ್ ಸೆ.8ರಂದು ಚಂದ್ರನ ಮೇಲೆ ಇಳಿಯಲಿದೆ.

ಇದಕ್ಕಾಗಿ ವಿವಿಧ ಹಂತಗಳಲ್ಲಿನ ಕಾಲಾವಧಿಯನ್ನು ಕಡಿಮೆ ಮಾಡಲಾಗಿದೆ. ಒಟ್ಟಾರೆ ಚಂದ್ರಯಾನದ ಅವಧಿಯನ್ನು 54 ದಿನಗಳಿಂದ 47 ದಿನಗಳಿಗೆ ಇಳಿಸಲಾಗಿದೆ. ಚಂದ್ರಯಾನ-2ಗಾಗಿ ಇಂದು ಸಂಜೆ 6.43ಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಇದೇ ವೇಳೆ ಶ್ರೀಹರಿಕೋಟಕ್ಕೆ ತೆರಳಿ ಚಂದ್ರಯಾನ ನೋಡಲು ನೋಂದಣಿ ಮಾಡಿಕೊಳ್ಳುವ ಅವಧಿ ನಿನ್ನೆಗೆ ಮುಕ್ತಾಯವಾಗಿತ್ತು.

ಮಂಗಳಯಾನಕ್ಕೆ ಶುಭಕೋರಿದ ಇಸ್ರೋ: ಚಂದ್ರಯಾನ 2 ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ – ಇಸ್ರೋ ಸಿದ್ಧವಾಗುತ್ತಿರುವ ಮಧ್ಯೆಯೇ ಬಾಲಿವುಡ್‍ನ್ ಮಂಗಳಯಾನಕ್ಕೂ ಶುಭ ಕೋರಿದೆ. ನಟ ಅಕ್ಷಯ ಕುಮಾರ್ ನಾಯಕ ನಟನಾಗಿರುವ ಮಂಗಳಯಾನ ಕುರಿತ ಸಿನಿಮಾ ಮಿಶನ್‍ಮಂಗಲ್‍ಗೆ ಇಸ್ರೋ ಟ್ವೀಟ್ ಮೂಲಕ ಶುಭ ಕೋರಿದೆ.

ಇಸ್ರೋ ತಂಡದ ಭಾವನೆಗಳು ಮತ್ತು ಬದ್ಧತೆಯನ್ನು ಮಿಶನ್‍ಮಂಗಲ್ ಟ್ರೇಲರ್ ಪ್ರದರ್ಶಿಸಿದೆ ಎಂದೂ ಇಸ್ರೋ ಮೆಚ್ಚುಗೆ ಸೂಚಿಸಿದೆ. ಇಸ್ರೋದ ಈ ಟ್ವೀಟ್‍ಗೆ ಅಕ್ಷಯ್‍ಕುಮಾರ್ ಧನ್ಯವಾದ ಹೇಳಿದ್ದಾರೆ.  ಇದು ಭಾರತದ ಪ್ರಪ್ರಥಮ ಪರಿಪೂರ್ಣ ಪ್ರಮಾಣದ ಬಾಹ್ಯಾಕಾಶ ಕುರಿತ ಸಿನಿಮಾ ಎಂಬುದು ಮತ್ತೊಂದು ಹೆಗ್ಗಳಿಕೆ.

Facebook Comments

Sri Raghav

Admin