ಚಂದ್ರಯಾನ-2 : ಚಂದಿರನ ಸುತ್ತ 1 ವರ್ಷ ಪೂರೈಸಿದ ಆರ್ಬಿಟರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.21- ಭಾರತದ ಮಹಾತ್ವಾಕಾಂಕ್ಷಿ ಚಂದ್ರಯಾನ-2 ಅಭಿಯಾನ ಒಂದು ವರ್ಷ ಪೂರ್ಣಗೊಂಡಿದೆ. ಚಂದಿರನ ಅಂಗಳದಲ್ಲಿ ಭಾರತದ ಈ ಅಭಿಯಾನ ಶೇ.95ರಷ್ಟು ಯಶಸ್ವಿಯಾಗಿದೆ.

ಚಂದ್ರನ ಸಂಶೋಧನೆಯಲ್ಲಿರುವ ಎಲ್ಲಾ 8 ಪೆಲೋಡಗಳು ಅತ್ಯಂತ ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.

ಚಂದ್ರನ ಕಕ್ಷೆಯಲ್ಲಿರುವ ಇಸ್ರೋದ ಆರ್ಬಿಟರ್ ಚಂದನ ಸುತ್ತ ಪ್ರದಕ್ಷೀಣೆಯಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ಈ ಅವಯಲ್ಲಿ ಆರ್ಬಿಟರ್ 17 ಬಾರಿ ಚಂದ್ರನ ಕಕ್ಷೆಯಲ್ಲಿ ಸಂಚರಿಸಿದೆ ಎಂದು ಇಸ್ರೋ ತಿಳಿಸಿದೆ.

ಚಂದಿರನ ಕಕ್ಷೆಯಲ್ಲಿರುವ ಆರ್ಬಿಟರ್ ಅತ್ಯಂತ ಸಂಪರ್ಕವಾಗಿ ಕಾರ್ಯ ನಿರ್ವಹಿಸುತ್ತಿದ್ದು , ಇನ್ನೂ 7 ವರ್ಷಗಳಿಗೆ ಸಾಕಾಗುವಷ್ಟು ಇಂಧನ ಅದರಲ್ಲಿದೆ ಎಂದು ಇಸ್ರೋ ತಿಳಿಸಿದೆ.

ಭಾರತದ ಚಂದ್ರಾಯಾನ 2 ಅಭಿಯಾನ ಶೇ.90ರಷ್ಟು ಯಶಸ್ವಿಯಾಗಿದ್ದರೂ, ಕೊನೆ ಕ್ಷಣದಲ್ಲಿ ಶಶಾಂಕನ ಅಂಗಳದಲ್ಲಿ ಲ್ಯಾಂಡರ್ ಹಗುರವಾಗಿ ಇಳಿಯುವ ಬದಲು ತಾಂತ್ರಿಕ ದೋಷದಿಂದ ಸ್ಪರ್ಶಿ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿತ್ತು.

Facebook Comments

Sri Raghav

Admin