ಚಂದ್ರಯಾನ-2 ಕುರಿತ ಹೊಸದೊಂದು ಸುದ್ದಿ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 16- ಭಾರತದ ಮಹತ್ವಾಯಾಂಕ್ಷೆಯ ಚಂದ್ರಯಾನ್ -2 ಜುಲೈನಲ್ಲಿ ಉಡಾವಣೆಯಾಗಲಿದ್ದು, ಈ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.

ಮತ್ತೊಂದು ಗಮರ್ನಾಹ ಸಂಗತಿ ಎಂದರೆ ಚಂದಿರನ ಮೇಲೆ ಕಾಲಿಡಲಿರುವ ಚಂದ್ರಯಾನ್-2 ನೌಕೆಯೊಂದಿಗೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಅತ್ಯಾಧುನಿಕ ಸಾಧನವೂ ಅಲ್ಲಿಗೆ ರವಾನೆಯಾಗಲಿದೆ. ಈ ಅತ್ಯಾಧುನಿಕ ಉಪಕರಣವು ಭೂಮಿ ಮತ್ತು ಚಂದ್ರನ ನಡುವೆ ಇರುವ ನಿಖರ ಅಂತರವನ್ನು ಲೆಕ್ಕಾಚಾರ ಮಾಡಲು ಸಹಕಾರಿಯಾಗಲಿದೆ.

ಈ ಕುರಿತು ವಿವರ ನೀಡಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್, ನಾಸಾದ ಪ್ಯಾಸೀವ್ ಎಕ್ಸ್‍ಪರಿಮೆಂಟಲ್ ಟೂಲ್‍ನೊಂದಿಗೆ ಭಾರತದ ಆರ್‍ಬಿಟರ್ (ಕಕ್ಷೆ ಪ್ರದಕ್ಷಿಣೆ ಸಾಧನ), ಲ್ಯಾಂಡರ್-ವಿಕ್ರಂ ಮತ್ತು ರೋವರ್-ಪ್ರಗ್ಯಾನ್ ಚಂದಿರನ ಮೇಲೆ ಮಹತ್ವದ ಹೊಸ ಸಂಶೋಧನೆಗಳನ್ನು ನಡೆಸಲಿದೆ ಎಂದರು. ಇದಲ್ಲದೆ ಇತರ 13 ಪೇ ಲೋಡ್‍ಗಳು (ಅತ್ಯಾಧುನಿಕ ಸಾಧನಗಳು)ಸಹ ಚಂದಿರನ ಮೇಲ್ಮಮೈ ಮೇಲೆ ಸಂಶೋಧನೆ ನಡೆಸಲಿದೆ.

ನಾಸಾದ ಅತ್ಯಾಧುನಿಕ ಕ್ಯಾಮರಾ ಅಳವಡಿತ ಸಾಧನವು ಚಂದಿರನ ಮೇಲ್ಮೈ ನಿಂದ ಭೂಮಿ ನಡುವೆ ಇರುವ ನಿಖರ ಅಂತರವನ್ನು ಕರಾರುವಕ್ಕಾಗಿ ಲೆಕ್ಕಾಚಾರ ಮಾಡಲಿದೆ. ಈಗ ನಮಗೆ ತಿಳಿದಿರುವ ಅಂತರಕ್ಕಿಂತ ಇನ್ನೂ ಪರಿಪೂರ್ಣವಾಗಿ ವಸುಂಧರೆ-ಶಶಾಂಕನ ನಡುವಣ ದೂರ ಅತ್ಯಂತ ನಿಖರವಾಗಿ ತಿಳಿದು ಬರಲಿದೆ ಎಂದು ಶಿವನ್ ವಿವರಿಸಿದರು.

ಇಸ್ರೋದ ಸಾಧನ-ಉಪಕರಣಗಳು ಚಂದ್ರನ ಮೇಲ್ಮೈನ ಹೆಚ್ಚು ಚಿತ್ರಗಳನ್ನು ತೆಗೆಯಲಿದೆ ಅಲ್ಲದೆ ಅದರ ವಾತಾವರಣ, ಅದರ ವೈವಿಧ್ಯತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಶೋಧನೆ ನಡೆಸಲು ನೆರವಾಗಲಿದೆ ಎಂದು ಅವರು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ