ಸುಲಿಗೆ ಪ್ರಕರಣದಲ್ಲಿ ದಾವೂದ್ ವಿರುದ್ಧ ಚಾರ್ಜ್‍ಶೀಟ್

ಈ ಸುದ್ದಿಯನ್ನು ಶೇರ್ ಮಾಡಿ

Dawood-Ibarhim
ಥಾಣೆ, ಜೂ.30-ಕಟ್ಟಡ ನಿರ್ಮಾತೃ ಒಬ್ಬರಿಂದ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂದ ಹಾಗೂ ಆತನ ಸಹೋದರರಾದ ಇಕ್ಬಾಲ್ ಕಸ್ಕರ್ ಮತ್ತು ಅನೀಸ್ ಇಬ್ರಾಹಿಂ ವಿರುದ್ಧ ಥಾಣೆ ಪೊಲೀಸರು ದೋಷಾರೋಪ ದಾಖಲಿಸಿದ್ದಾರೆ. ಕಳೆದ ವರ್ಷ ಖ್ಯಾತ ಬಿಲ್ಡರ್ ಒಬ್ಬರನ್ನು ಬೆದರಿಸಿದ ಕಸ್ಕರ್, ಗೊರೈಯ್ ಪ್ರದೇಶದಲ್ಲಿ 38 ಎಕರೆ ಭೂ ವ್ಯವಹಾರದಲ್ಲಿ 3 ಕೋಟಿ ರೂ. ಹಫ್ತಾ ಸುಲಿಗೆ ಮಾಡಿದ್ದ. ಈ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ದೂರು ನೀಡಿದ್ದರು. ಈಗ ಈ ಪ್ರಕರಣದಲ್ಲಿ ದಾವೂದ್ ಮತ್ತು ಆತನ ಸಹೋದರರ ವಿರುದ್ಧ ಪೊಲೀಸರು ಜಿಲ್ಲಾ ನ್ಯಾಯಾಲಯವೊಂದರಲ್ಲಿ ಚಾರ್ಜ್‍ಶೀಟ್ ದಾಖಲಿಸಿದ್ದಾರೆ.

Facebook Comments

Sri Raghav

Admin