ಚಾರ್ಮಾಡಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ, ಅಪಾಯದ ಸ್ಥಳದಲ್ಲಿ ಸೆಲ್ಫಿಗಿಲ್ಲ ಬ್ರೇಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬಣಕಲ್, ಸೆ.21- ಕಾಫಿ ನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಚಾರ್ಮಾಡಿ ಘಾಟಿ ಭಾಗದಲ್ಲಿ ಅಲ್ಲಲ್ಲಿ ಧರೆ ಕುಸಿತ ಕಂಡು ಬಂದಿದ್ದರೂ ಪ್ರವಾಸಿಗರಿಗೆ ಮಾತ್ರ ಚಾರ್ಮಾಡಿ ಘಾಟ್‍ನಲ್ಲಿ ಮೋಜು ಮಸ್ತಿಗೆ ಕಡಿವಾಣ ಇಲ್ಲದಂತಾಗಿದೆ.ನಿನ್ನೆ ಭಾರೀ ಮಳೆ ಸುರಿಯುತ್ತಿದ್ದರೂ ಚಾರ್ಮಾಡಿ ರಸ್ತೆಯಲ್ಲಿ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಏರುತ್ತಲೇ ಇದೆ.

ಪ್ರವಾಸಿಗರು ಅಪಾಯದ ಸ್ಥಳದಲ್ಲಿ ಸೆಲ್ಫಿ ತೆಗೆಯುವುದು, ಜಲಪಾತದ ಅಪಾಯದ ಸ್ಥಳಗಳನ್ನು ಏರುವುದು ಮಾಡಿಕೊಂಡು ಬರುತ್ತಿದ್ದಾರೆ. ಚಾರ್ಮಾಡಿಯಲ್ಲಿ ಅಪಾಯವಿದ್ದರೂ ಪ್ರವಾಸಿಗರು ಮಾತ್ರ ಯಾವುದೇ ಭಯವಿಲ್ಲದೇ ಜಲಪಾತಗಳತ್ತ ಮುಖ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ವೀಕ್ ಎಂಡ್ ಆದುದರಿಂದ ಚಾರ್ಮಾಡಿಯಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ. ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿ ಬಂದಿದೆ.

ಚಾರ್ಮಾಡಿ ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದು ಮಳೆಗಾಲದಲ್ಲಿ ಈಗ ಜಲಪಾತಗಳ ಬೋರ್ಗರೆತ ಹೆಚ್ಚಾಗಿದೆ. ಆದರೆ ಅಪಾಯದ ಸ್ಥಳದಲ್ಲಿ ಪ್ರವಾಸಿಗರ ಮೋಜು ಮಸ್ತಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚಾರ್ಮಾಡಿಯಲ್ಲಿ ಬೀಟ್ ಪೊಲೀಸರನ್ನು ನೇಮಿಸಿದ್ದೇವೆ. ಅವರು ಅಲ್ಲಿ ಗಸ್ತು ತಿರುಗುತ್ತಾರೆ. ಅಪಾಯದ ಸ್ಥಳದಲ್ಲಿ ಸೆಲ್ಪಿ ತೆಗೆಯುವುದು, ಮೋಜು ಮಸ್ತಿ ಮಾಡಿರುವ ಬಗ್ಗೆ ದೂರು ಬಂದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಬಣಕಲ್ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ತಿಳಿಸಿದ್ದಾರೆ.

Facebook Comments