ಶ್ರೀಗಂಧ ಮರಗಳ್ಳರಿಂದ ಶಾಸಕ ದೇವಾನಂದ್ ಚೌವ್ಹಾಣ್‍ಗೆ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಶ್ರೀಗಂಧದ ಮರ ಕಳ್ಳತನಕ್ಕೆ ಬಂದಿದ್ದವರು ತಮಗೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಶಾಸಕ ದೇವಾನಂದ್ ಚೌವ್ಹಾಣ್ ಆರೋಪಿಸಿದ್ದಾರೆ. ವಿಜಯಪುರದ ಕೆ.ಎಚ್.ಪಿ.ಕಾಲೋನಿಯಲ್ಲಿರುವ ತಮ್ಮ ಮನೆಯ ಕಾಂಪೌಂಡ್ ಬಳಿ ನ.15ರ ಬೆಳಗಿನ ಜಾವ 3ಗಂಟೆಯಲ್ಲಿ ಐದಾರು ಮಂದಿ ಬಂದಿದ್ದು, ಗಂಧದ ಮರ ಕಡಿಯುವ ಸಂಬಂಧ ಗಲಾಟೆ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ತಾವು ಎಚ್ಚರಗೊಂಡು ಬಾಲ್ಕಾನಿ ಬಾಗಿಲು ತೆಗೆದು ರಾತ್ರಿ ವೇಳೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ ಎಂದು ಈ ಸಂಜೆಗೆ ತಿಳಿಸಿದರು. ಆಗ ಅವರು ನಿಮ್ಮನೇ ನೋಡಲು ಬಂದಿದ್ದೇವೆ ಎಂದು ಉತ್ತರಿಸಿದರು. ಅವರ ಮತ್ತು ನನ್ನ ನಡುವೆ 10 ನಿಮಿಷ ಮಾತುಕತೆಯೂ ನಡೆಯಿತು. ತಮ್ಮನ್ನು ನಿಂದಿಸಿದರು.

ಒಳಗೆ ಹೋಗದಿದ್ದರೆ ಗುಂಡು ಹೊಡೆದು ಹತ್ಯೆ ಮಾಡುವುದಾಗಿ ಬೆದರಿಸಿದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದೆ. ಆಗ ಪೊಲೀಸರು ಬರುತ್ತಿರುವುದನ್ನು ನೋಡಿ ಓಡಿ ಹೋದರು ಎಂದು ಘಟನೆ ಬಗ್ಗೆ ಮಾಹಿತಿ ನೀಡಿದರು.

Facebook Comments