ಚೆಕ್‍ಬೌನ್ಸ್ ಪ್ರಕರಣ ಇತ್ಯರ್ಥಕ್ಕೆ ಕಾನೂನು ತಿದ್ದುಪಡಿಗೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ. ಏ.16- ಚೆಕ್ ಬೌನ್ಸ್ ಕೇಸ್‍ಗಳನ್ನು ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ತರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಪ್ರಕರಣ ದಾಖಲಾದ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು. ದೂರುದಾರ ಹಾಗೂ ಆರೋಪಿಯ ವಿಚಾರಣೆ ಶೀಘ್ರಗತಿಯಲ್ಲಿ ನಡೆಯಬೇಕು, ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕಾನೂನು ಮಾರ್ಪಾಡು ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಬೋಬ್ಡೆ ನೇತೃತ್ವದ ಪಂಚಪೀಠ ಮಹತ್ವದ ಸೂಚನೆ ನೀಡಿದೆ.

ದೇಶಾದ್ಯಂತ ಎಲ್ಲಾ ಹೈಕೋರ್ಟ್‍ಗಳು ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ಅಧೀನ ನ್ಯಾಯಾಲಯಗಳಿಗೆ ಮಾರ್ಗಸೂಚಿ ನೀಡಬೇಕು ಎಂದು ತಿಳಿಸಿದೆ. ವಿಳಂಬವಾಗುತ್ತಿರುವ ವಿಚಾರಣೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅರ್ಜಿದಾರ ಹಾಗೂ ದೂರುದಾರನಿಗೆ ಶೀಘ್ರ ನ್ಯಾಯ ಸಿಗಬೇಕಾದುದು ಅವಶ್ಯಕತೆ ಇದೆ ಎಂದು ಪೀಠ ಪ್ರತಿಪಾದಿಸಿದೆ.

ಕಳೆದ ವರ್ಷ ಮಾರ್ಚ್ 5ರಂದು ಚೆಕ್ ಬೌನ್ಸ್‍ಗಳ ಕುರಿತಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ಕೈಗೊಳ್ಳಲಾಗಿತ್ತು.

Facebook Comments