5 ವರ್ಷದ ಹೆಣ್ಣು ಚಿರತೆ ಬೋನಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀರಂಗಪಟ್ಟಣ,ಜೂ.9-ಮುಂಜಾನೆ ಐದು ವರ್ಷದ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿದ್ದು, ತಾಲ್ಲೂಕಿನ ತಡಗವಾಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಹಲವಾರು ದಿನಗಳಿಂದ ಚಿರತೆ ಗ್ರಾಮಕ್ಕೆ ನುಗ್ಗಿ ಸಾಕುಪ್ರಾಣಿಗಳನ್ನು ತಿಂದಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ಜನರು ಅರಣ್ಯ ಇಲಾಖೆಗೆ ಮನವಿ ಮಾಡಿ ಚಿರತೆ ಹಿಡಿಯುವಂತೆ ಒತ್ತಾಯಿಸಿದ್ದರು.

ಗ್ರಾಮಸ್ಥರ ಮನವಿ ಮೇರೆಗೆ ತಡಗವಾಡಿ ತೋಟದ ಬಳಿ ಅರಣ್ಯ ಇಲಾಖೆಯವರು ಬೋನ್ ಇಟ್ಟು ನಾಯಿಯೊಂದನ್ನು ಕಟ್ಟಿದ್ದರು.  ಮಧ್ಯರಾತ್ರಿ ಯಾವಾಗಲೋ ನಾಯಿ ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಗ್ರಾಮಸ್ಥರು ಬೆಳಗ್ಗೆ ಚಿರತೆ ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.  ಅಧಿಕಾರಿಗಳು ಬಂದು ಚಿರತೆಗೆ ಅರವಳಿಕೆ ಚುಚ್ಚುಮದ್ದು ಕೊಟ್ಟು ಕೊಂಡೊಯ್ದಿದ್ದಾರೆ.

Facebook Comments