ಬೆಂಗಳೂರಲ್ಲಿ ಕೊರೋನಾ ಕಂಟ್ರೋಲ್‌ಗೆ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.16- ನಗರದಲ್ಲಿ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯಾಚರಣೆಗೆ ಇಂದು ಚಾಲನೆ ನೀಡಲಾಯಿತು.

ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬಿಬಿಎಂಪಿ ಅಧಿಕಾರಿಗಲು ಇಂದು ದ್ರೋಣ್ ಮೂಲಕ ಸ್ಯಾನಿಟೈಸರ್ ಮಾಡುವ ಕಾರ್ಯಾಚರಣೆಗೆ ವಿದ್ಯುಕ್ತವಾಗಿ ಚಾಲನೆ ಕೊಟ್ಟರು.

ಮೊದಲ ಹಂತದಲ್ಲಿ ಬೆಂಗಳೂರಿನ ಯಾವ ಯಾವ ಭಾಗದಲ್ಲಿ ಹೆಚ್ಚಿನ ಸೋಂಕಿನ ಪ್ರಕರಣಗಳಿವೆಯೋ ಅಂತಹ ಕಡೆ ದ್ರೋಣ್ ಮೂಲಕವೇ ಸ್ಯಾನಿಟೈಸರ್ ಮಾಡಲಾಗುತ್ತದೆ.

ಸದ್ಯಕ್ಕೆ ಮೊದಲ ಹಂತದಲ್ಲಿ 25 ದ್ರೋಣ್‍ಗಳನ್ನು ಚೆನ್ನೈನಿಂದ ಖರೀದಿ ಮಾಡಲಾಗಿದೆ. 50 ಮೀಟರ್ ಉದ್ದವಿರುವ ಈ ದ್ರೋಣ್‍ಗಳಲ್ಲಿ 16 ಲೀಟರ್ ದ್ರಾವಣವನ್ನು ಮಿಶ್ರಣಮಾಡಿ ಸಿಂಪಡಣೆ ಮಾಡಬಹುದಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯ ಸೇರಿದಂತೆ ಹೆಚ್ಚು ಸೋಂಕು ಆವರಿಸಿರುವ ಪ್ರದೇಶಗಳಲ್ಲಿ ದ್ರೋಣ್ ಮೂಲಕವೇ ಸಿಂಪಡಣೆ ಮಾಡಲಾಗುತ್ತದೆ.

ಚೆನ್ನೈ , ಮುಂಬೈ, ನವದೆಹಲಿ ಸೇರಿದಂತೆ ಮತ್ತಿತರ ಕಡೆ ದ್ರೋಣ್‍ನಿಂದ ಸ್ಯಾನಿಟೈಸರ್ ಮಾಡಿದ ಪರಿಣಾಮ ಕೊಂಚ ಸೋಂಕು ಹಬ್ಬುವುದು ಇಳಿಮುಖವಾಗಿತ್ತು. ಈಗ ಬೆಂಗಳೂರಿನಲ್ಲಿ ಈ ಮಾದರಿಯನ್ನು ಪಾಲಿಕೆ ಮುಂದಾಗಿದೆ.

ಒಂದು ವೇಳೆ ಇನ್ನು ಒಂದು ವಾರದೊಳಗೆ ಇದು ಯಶಸ್ವಿಯಾಗಿ ಕಂಡುಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದ್ರೋಣ್‍ಗಳನ್ನು ಖರೀದಿಸಿ ಸ್ಯಾನಿಟೈಸರ್ ಮಾಡುವ ಮೂಲಕ ಸೋಂಕು ಒಬ್ಬರಿಂದ ಒಬ್ಬರಿಗೆ ತಡೆಗಟ್ಟಲು ಪಾಲಿಕೆ ತೀರ್ಮಾನಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇದಕ್ಕೆ ಸಮ್ಮತಿಸಿದ್ದು, ದ್ರೋಣ್‍ನಿಂದ ಸಕಾರಾತ್ಮಕ ಫಲಿತಾಂಶ ಬಂದರೆ ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin