ಸಿಎಸ್‍ಕೆಯಿಂದ ರಾಯುಡು, ಮುರಳಿ, ಜಾಧವ್ ಔಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ. 13- ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ 2 ವರ್ಷಗಳಿಂದ ನಿಷೇಧಕ್ಕೊಳಗಾಗಿದ್ದ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಕಳೆದ ಬಾರಿ ಮತ್ತೆ ಚಾಂಪಿಯನ್ಸ್ ಆಗುವ ಮೂಲಕ ಪ್ರೇಕ್ಷಕರ ದಿಲ್ ಗೆದ್ದಿದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಮುಂದಿನ ಬಾರಿಯ ಐಪಿಎಲ್‍ನಲ್ಲಿ ಚಾಂಪಿಯನ್ಸ್ ಆಗಲು ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ ಕೆಲವು ಆಟಗಾರರಿಗೆ ಕೊಕ್ ನೀಡಲು ಕೂಡ ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ. ವಿಶ್ವಕಪ್‍ನಲ್ಲಿ ಸ್ಥಾನ ದೊರೆಯಲಿಲ್ಲ ಎಂಬ ಕೋಪದಿಂದ ನಿವೃತ್ತಿ ಘೋಷಿಸಿ ನಂತರ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿರುವ ಅಂಬಾಟಿ ರಾಯುಡು ಕಳೆದ ಐಪಿಎಲ್‍ನಲ್ಲಿ ತಮ್ಮ ಬ್ಯಾಟ್‍ನಿಂದ ರನ್‍ಗಳ ಸುರಿಮಳೆಯನ್ನೇ ಸುರಿಸಿದ್ದರೂ ಕೂಡ ಮುಂಬರುವ ಐಪಿಎಲ್‍ನಿಂದ ಅವರನ್ನು ಹೊರಗಿಡಲು ಚಿಂತನೆ ನಡೆಸಿರುವುದು ಅಚ್ಚರಿ ಮೂಡಿಸಿದೆ.

ಕಳೆದ ಐಪಿಎಲ್‍ನಲ್ಲಿ ಗಾಯಗೊಂಡು ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್ ಕೇದಾರ್‍ಜಾಧವ್, ಕಳಪೆ ಪ್ರದರ್ಶನ ನೀಡಿದ್ದ ಮುರಳಿ ವಿಜಯ್ ಅವರನ್ನು ತಂಡದಿಂದ ಕೈಬಿಡಲು ಮಹತ್ತರ ತೀರ್ಮಾನವನ್ನು ಸಿಎಸ್‍ಕೆ ತಂಡದ ಆಡಳಿತ ಮಂಡಳಿ ಕೈಗೊಂಡಿದೆ.

ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ತೀರ್ಮಾನ ಕೈಗೊಳ್ಳಲು ನಾಳೆ ಅಂತಿಮ ದಿನವಾಗಿರುವುದರಿಂದ ಸಿಎಸ್‍ಕೆ ತನ್ನ ತಂಡದಲ್ಲಿ ಕಳಪೆ ಪ್ರದರ್ಶನ ತೋರಿರುವ ರಾಯುಡು, ಮುರಳಿ ವಿಜಯ್, ಕೇದಾರ್ ಜಾಧವ್, ಶಾರ್ದೂಲ್‍ಠಾಕೂರ್, ಕರಣ್‍ಶರ್ಮಾರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಾರೋ ಅಥವಾ ಕೊಕ್ ನೀಡುತ್ತಾರೋ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಒಟ್ಟಾರೆ ಮಹೇಂದ್ರಸಿಂಗ್ ನಾಯಕತ್ವದ ಸಿಎಸ್‍ಕೆ ತಂಡವು 13ನೇ ಆವೃತ್ತಿಯಲ್ಲಿ ಬಲಿಷ್ಠ ತಂಡವಾಗಿಮ ಮಾರ್ಪಾಡಲು ಚಿಂತನೆ ನಡೆಸಿದ್ದು ಡಿಸೆಂಬರ್ 19ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಇನ್ನ್ಯಾವ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಐಪಿಎಲ್ ಚಾಂಪಿಯನ್ಸ್ ಆಗಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಂಬರುವ ಐಪಿಎಲ್ ಮುಕುಟವನ್ನು ಗೆದ್ದುಕೊಳ್ಳಲು ಭರ್ಜರಿ ತಯಾರಿ ನಡೆಸಿದೆ.

Facebook Comments