“ಶಾರುಖ್‍ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪೌಡರ್ ಆಗಿಬಿಡುತ್ತೆ”

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.24- ಬಾಲಿವುಡ್ ನಟ ಶಾರುಖ್ ಖಾನ್ ಒಂದು ವೇಳೆ ಬಿಜೆಪಿಗೆ ಸೇರ್ಪಡೆಯಾದರೆ ಮಾದಕವಸ್ತು ಶುಗರ್ ಪೌಡರ್ ಆಗಿ ಬದಲಾಗಿದೆ ಎಂದು ಬಿಜೆಪಿ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಚಗನ್ ಭುಜ್ಪಾಲ್ ವ್ಯಂಗ್ಯವಾಡಿದ್ದಾರೆ.

ಮುಂಬೈನ ಬೀಡ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತಾಡಿದ ಅವರು, ಮುಂಬೈ ಡ್ರಗ್ ಪ್ರಕರಣವನ್ನು ಉಲ್ಲೇಖಿಸಿ, ಬಿಜೆಪಿಯ ದ್ವಿಗುಣ ಮಾನದಂಡಗಳ ಬಗ್ಗೆ ಕಿಡಿಕಾರಿದ್ದಾರೆ.

ಒಂದು ವೇಳೆ ಶಾರುಖ್ ಖಾನ್ ಕೇಸರಿ ಪಕ್ಷಕ್ಕೆ ಸೇರುವುದಾದರೆ, ಪುತ್ರ ಆರ್ಯನ್‍ಖಾನ್ ಮಾದಕವಸ್ತು ಪ್ರಕರಣದಲ್ಲಿ ಡ್ರಗ್ ಶುಗರ್ ಪೌಡರಾಗಿ ಬದಲಾಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗುಜರಾತ್‍ನ ಮುಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ 3,000 ಕೆಜಿ ಹೆರಾಯಿನ್ ಪ್ರಕರಣದ ತನಿಖೆ ನಡೆಸುವ ಬದಲು, ಎನ್‍ಸಿಬಿ ಶಾರೂಖ್ ಖಾನ್‍ನನ್ನು ಬೇಟೆಯಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿದ್ದು, ಆರ್ಯನ್ ಎನ್‍ಸಿಬಿಯಿಂದ ಬಂಧನಕ್ಕೊಳಗಾಗಿದ್ದಾನೆ. ಆತನ ಜÁಮೀನು ಅರ್ಜಿಯನ್ನು ತಿರಸ್ಕಾರಗೊಂಡು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.

Facebook Comments

Sri Raghav

Admin