ಛಪಕ್ ಚಿತ್ರಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂಗೆ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.9- ಭಾರೀ ಸಂಚಲನ ಸೃಷ್ಟಿಸಿರುವ ದೆಹಲಿಯ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್‍ವಾಲ್ ಜೀವನ ಮತ್ತು ಸಾಧನೆ ಕುರಿತ ದೀಪಿಕಾ ಪಡುಕೋಣೆ ಅಭಿನಯದ ಛಪಕ್ ಚಿತ್ರಕ್ಕೆ ಹೊಸ ಕಾನೂನು ಕಂಟಕ ಎದುರಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಲಕ್ಷ್ಮೀ ಅಗರ್‍ವಾಲ್ ಪರ ವಕೀಲರಾದ ಅಪರ್ಣಭಟ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಈ ಪ್ರಕರಣದಲ್ಲಿ ನಾನು ಹಲವಾರು ವರ್ಷಗಳ ಕಾಲ ಲಕ್ಷ್ಮೀಪರ ವಕಾಲತ್ತು ವಹಿಸಿ ಕೋರ್ಟ್‍ಗಳಲ್ಲಿ ವಾದ ಮಂಡಿಸಿದ್ದೇನೆ ಮತ್ತು ಆಕೆಯ ಜೀವನ ಕುರಿತ ಸಿನಿಮಾ ನಿರ್ಮಿಸಲು ನಾನು ನೆರವಾಗಿದ್ದೇನೆ. ಆದರೆ, ಚಿತ್ರದಲ್ಲಿ ನನ್ನ ಹೆಸರನ್ನು ಉಲ್ಲೇಖಿಸುವ ಸೌಜನ್ಯವನ್ನು ನಿರ್ಮಾಪಕರು ತೋರಿಲ್ಲ. ಹೀಗಾಗಿ ಈ ಚಿತ್ರದ ನಿರ್ಬಂಧ ಹೇರಬೇಕೆಂದು ಮನವಿ ಅರ್ಜಿಯಲ್ಲಿ ಕೋರಿದ್ದಾರೆ.

ಚಿತ್ರಕ್ಕೆ ಅಗತ್ಯವಾದ ಕಾನೂನು ಸನ್ನಿವೇಶಗಳ ಕುರಿತು ಚಿತ್ರತಂಡ ನನ್ನ ನೆರವು ಕೋರಿತ್ತು, ಅದಕ್ಕಾಗಿ ಆ ಸನ್ನಿವೇಶಗಳ ವಿವರಗಳನ್ನು ಬರೆದುಕೊಟ್ಟಿದ್ದೇನೆ. ಅಲ್ಲದೆ ಶೂಟಿಂಗ್ ಸಂದರ್ಭದಲ್ಲಿ ಸಹಕಾರ ನೀಡಿದ್ದೇನೆ.

ಇಷ್ಟಾದರೂ ಸಿನಿಮಾದಲ್ಲಿ ನನ್ನ ಒಂದೇ ಒಂದು ಹೆಸರನ್ನು ಉಲ್ಲೇಖಿಸಿಲ್ಲ (ಕ್ರಡಿಟ್ ನೀಡಿಲ್ಲ) ಎಂಬುದು ಅವರ ಆರೋಪವಾಗಿದೆ. ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ವೊಂದು ಶೀಘ್ರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Facebook Comments