ವಿಷಾಹಾರದಿಂದ 26 ಯೋಧರು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

ರಾಯ್ಪುರ,ಅ.22- ವಿಷಾಹಾರದಿಂದಾಗಿ ಐಟಿಬಿಪಿ ಪಡೆಯ 26 ಯೋಧರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಛತ್ತೀಸ್‍ಘಡದಲ್ಲಿ ನಡೆದಿದೆ. ರಾಜಗೊಂಡ ಜಿಲ್ಲೆಯ ಕೈರಾಘರ್‍ನಗರದಲ್ಲಿ ಬೀಡುಬಿಟ್ಟಿದ್ದ ಐಟಿಬಿಪಿ 40ನೇ ಬೆಟಾಲಿಯನ್‍ನ ಯೋಧರು ನಿನ್ನೆ ರಾತ್ರಿ ಮಾಂಸ ಹಾಗೂ ಪನ್ನೀರಿನೊಂದಿಗೆ ಆಹಾರ ಸೇವಿಸಿದ್ದಾರೆ. ಬಳಿಕ ಅವರಲ್ಲಿ ವಾಂತಿ-ಬೇಧಿ ಕಾಣಿಸಿಕೊಂಡಿದೆ.

ನಿನ್ನೆ ರಾತ್ರಿಯೇ 21 ಮಂದಿಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 6 ಮಂದಿ ಆಸ್ಪತ್ರೆ ಸೇರಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿಷಾಹಾರವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಯೋಧರಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯ ಡಾ.ವಿವೇಕ್ ಹುಸೇನ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭುಪೇಂದ್ರ ಭಗೇಲಾ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯ ಅಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದು, ಯೋಧರಿಗೆ ಅಗತ್ಯ ಚಿಕಿತ್ಸೆ ಕೊಡಿಸಲು ಸೂಚಿಸಿದಾರೆ. ನಕ್ಸಲ್ ಪೀಡಿತ ಮಧ್ಯಪ್ರದೇಶ, ಛತ್ತೀಸ್‍ಘಡ ಗಡಿಗಳಲ್ಲಿ ಕಾರ್ಯಾಚರಣೆ ನಡೆಸಲು ಈ ತುಕ್ಕಡಿಯನ್ನು ನಿಯೋಜಿಸಲಾಗಿತ್ತು.

Facebook Comments