ತಂಗಿಯ ಮಾತಿಗೆ ಬೆಲೆಕೊಟ್ಟು ರಾಕಿ ಕಟ್ಟಿಕೊಂಡು ಖಾಕಿಗೆ ಶರಣಾದ ನಕ್ಸಲ್..!

ಈ ಸುದ್ದಿಯನ್ನು ಶೇರ್ ಮಾಡಿ

ದಾಂತೇವಾಡ, ಆ.3- ಅಕ್ಕ ಅಥವಾ ತಂಗಿಯನ್ನು ರಕ್ಷಣೆ ಮಾಡುವ ಸಲುವಾಗಿ ರಾಕಿ ಕಟ್ಟಿಸಿಕೊಂಡು ಅವರ ವಾಗ್ದಾನವನ್ನು ಪೂರೈಸುವ ಪವಿತ್ರ ಹಬ್ಬವೇ ರಕ್ಷಾಬಂಧನ. ಈ ಹಬ್ಬದಂದೇ ತನ್ನ ತಂಗಿ ಕೋರಿದ ಮಾತನ್ನು ಈಡೇರಿಸುವ ಸಲುವಾಗಿ ನಕ್ಸಲ್ ಮುಖ್ಯಸ್ಥನೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ.

ಛತ್ತೀಸ್‍ಗಢ ರಾಜ್ಯದ ನಕ್ಸಲ್ ಪೀಡಿತ ಪ್ರದೇಶ ವೆಂದೇ ಗುರುತಿಸಿಕೊಂಡಿದ್ದ ನಕ್ಸಲ್ ಮಲ್ಲ ಅಲ್ಲಿ ಸಾಕಷ್ಟು ದುಷ್ಕøತ್ಯಗಳನ್ನು ನಡೆಸುವ ಮೂಲಕ ಪ್ರಮುಖ ನಕ್ಸಲ್ ಆಗಿ ಗುರುತಿಸಿಕೊಂಡಿದ್ದ.

ಈತನ ಉಪಟಳವನ್ನು ತಪ್ಪಿಸಲು ಅಲ್ಲಿನ ಸರ್ಕಾರವು ಈತನ ಸುಳಿವು ಕೊಟ್ಟವರಿಗೆ 8 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು ಆದರೂ ಮಲ್ಲನ ಬಂಧನ ಸಾಧ್ಯವಾಗಿರಲಿಲ್ಲ.

ರಕ್ಷಾಬಂಧನವಾದ ಇಂದು ನಕ್ಸಲ್ ಮಲ್ಲನ ತಂಗಿ ರಾಕಿ ಕಟ್ಟಿದ ನಂತರ ನೀನು ನಕ್ಸಲ್ ಕೃತ್ಯಗಳನ್ನು ಬಿಟ್ಟು ಪೊಲೀಸರಿಗೆ ಶರಣಾಗಬೇಕೆಂಬ ಕೇಳಿದ ಕೂಡಲೇ ನಕ್ಸಲ್ ಮುಖ್ಯಸ್ಥ ಮಲ್ಲ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin