3 ತಿಂಗಳು ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಅಡಗಿದ್ದ ಭಾರತೀಯನನ್ನು ಆರೋಪಮುಕ್ತ ಗೊಳಿಸಿದ ಕೋರ್ಟ್ !

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಅ.28- ಸದಾ ಕಾಲ ಗಿಜಿಗುಡುತ್ತಿದ್ದ ಜನನಿಭೀಡ ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳ ಕಾಲ ಕಳೆದು ಹೋಗಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಅಮೆರಿಕಾ ನ್ಯಾಯಾಲಯ ಗಂಭೀರ ಆರೋಪದಿಂದ ಮುಕ್ತಗೊಳಿಸಿದೆ. ಆರು ಸ್ನಾತಕ್ಕೋತ್ತರ ಪದವಿ ಪಡೆಯಲು ಭಾರತದ ಆದಿತ್ಯ ಸಿಂಗ್ ಅಮೆರಿಕಾಗೆ ಬಂದಿದ್ದರು.

ಅದು ಮುಗಿದ ಬಳಿಕ 2020ರ ಅಕ್ಟೋಬರ್ 19ರಂದು ತಮ್ಮ ತಾಯ್ನಾಡಿಗೆ ಮರಳಲು ಲಾಲಸ್ ಏಂಜಲೀಸ್‍ನಿಂದ ಚಿಕಾಗೋಗೆ ತೆರಳಿದರು. ಕೊರೊನಾ ಸಾಂಕ್ರಾಮಿಕದಿಂದಾಗಿ ವಿಮಾನ ಹಾರಾಟ ಭಯಪಡುವಂತಾಗಿತ್ತು. ಆದಿತ್ಯ ಸಿಂಗ್ ಮೂರು ತಿಂಗಳ ಕಾಲ ಹರೆ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಬಚ್ಚಿಟ್ಟುಕೊಂಡಿದ್ದರು. ಈತ ಕಳೆದು ಹೋಗಿದ್ದಾನೆ ಎಂದು ಭಾವಿಸಲಾಗಿತ್ತು.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ನೀಡುತ್ತಿದ್ದ ಆಹಾರ ಪಡೆದು ಮತ್ತು ಅವರಿಂದ ಹಣ ಪಡೆದು ಅಗತ್ಯ ವಸ್ತುಗಳನ್ನು ಖರೀದಿಸಿ ಜೀವನ ನಡೆಸಿದ್ದಾರೆ. ಭದ್ರತೆ ಹಾಗೂ ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿ ಸಿಬ್ಬಂದಿಗಳಿಗೆ ಸಿಕ್ಕರೆ ಗುರುತಿನ ದಾಖಲೆಗಳನ್ನು ಹಾಜರು ಪಡಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಆದಿತ್ಯ ಸಿಂಗ್ ಶೌಚಾಲಯ, ಸ್ನಾನದ ಗೃಹ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಅಡಗಿರುತ್ತಿದ್ದರು. ಅಂತಿಮವಾಗಿ ಜನವರಿ 16ರಂದು ಪೊಲೀಸರು ಆದಿತ್ಯನನ್ನು ಬಂಧಿಸಿದ್ದರು.

ಸುರಕ್ಷತಾ ವಲಯ ವಿಮಾನನಿಲ್ದಾಣವನ್ನು ಅತಿಕ್ರಮಣ ಮಾಡಿದ ಗಂಭೀರ ಆರೋಪ ದಾಖಲಿಸಲಾಯಿತು. ಆದರೆ ವಿಚಾರಣೆ ನಡೆಸಿದ ಪೊಲೀಸರು ಬಂಧಿತನಿಗೆ ಯಾವುದೇ ಅಪರಾಧಗಳ ಹಿನ್ನೆಲೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ವಿಮಾನ ಪ್ರಾಧಿಕಾರದ ವಕ್ತಾರರು, ವಿಮಾನ ನಿಲ್ದಾಣಕ್ಕೆ ಎಲ್ಲಾ ಪ್ರಯಾಣಿಕರಂತೆ ಆದಿತ್ಯ ಬಂಧಿದ್ದಾನೆ. ಅತಿಕ್ರಮಣದ ಉದ್ದೇಶ ಆತನಲ್ಲಿ ಕಂಡು ಬಂದಿಲ್ಲ ಎಂದು ಹೇಳಿಕೆ ದಾಖಲಿಸಿದ್ದರು. ದಿ ಟರ್ಮಿನಲ್ ಎಂಬ ಚಲನಚಿತ್ರವನ್ನು ಹೋಲುವ ಆದಿತ್ಯ ಸಿಂಗ್‍ನ ಪ್ರಕರಣದಲ್ಲಿ ನ್ಯಾಯಾಧೀಶ ಆಡ್ರಿನೇ ಡೇವಿಸ್ ಗಂಭೀರ ಆರೋಪದಿಂದ ಖುಲಾಸೆಗೊಳಿಸಿದ್ದಾರೆ. ಆದರೆ ಅಕ್ರಮ ವಲಸೆ ಆರೋಪ ಮುಂದುವರೆಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಒಕ್ಲಾಹೋಮಾ ವಿಶ್ವವಿಶ್ವ ವಿದ್ಯಾಲಯದ ವ್ಯಾಸಂಗದ ಬಳಿಕ ಆತ 2019ರ ಬೇಸಿಗೆಯಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಲು ಸಿದ್ಧತೆ ನಡೆಸಿದ್ದ.

ಆಗ್ನೇಯ ಲಾಸ್‍ಏಂಜಲೀಸ್‍ನಲ್ಲಿ ಆದಿತ್ಯ ಒಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದ, ಅಲ್ಲಿನ ವ್ಯಕ್ತಿ ವಯಸ್ಸಾಗಿರುವ ತಮ್ಮ ತಂದೆಯನ್ನು ನೋಡಿಕೊಂಡರೆ, ವಾಸಿಸಲು ಜಾಗ ಮತ್ತು ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ. ಆ ವೇಳೆಗೆ ಆದಿತ್ಯ ಸಿಂಗ್ ವೀಸಾ ಅವಧಿ ಮುಗಿದು ಹೋಗಿತ್ತು. 2020ರ ಅಕ್ಟೋಬರ್‍ನಲ್ಲಿ ಭಾರತಕ್ಕೆ ತೆರಳಿ ತಾಯಿಯನ್ನು ಭೇಟಿ ಮಾಡುವ ಆದಿತ್ಯನ ಉದ್ದೇಶಕ್ಕೆ ಕೊರೊನಾ ಅಡ್ಡಿ ಪಡಿಸಿತ್ತು.

Facebook Comments