ಚಿಕಾಗೊ : ಪಾರ್ಟಿ ಮಸ್ತಿಯಲಿದ್ದ ಯುವಕರ ಗುಂಪಿನಿಂದ ಪರಸ್ಪರ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕಾಗೋ, ಮಾ.15-ಪಾರ್ಟಿ ಸಂಭ್ರಮದಲ್ಲಿ ಯುವಕರ ಗುಂಪೊಂದು ಪರಸ್ಪರ ಗುಂಡಿನ ದಾಳಿ ನಡೆಸಿಕೊಂಡ ಘಟನೆಯಲ್ಲಿ ಇಬ್ಬರು ಮೃತಪಟ್ಟು ಇತರ 13 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಅಮೆರಿಕಾದ ಚಿಕಾಗೊದಲ್ಲಿ ನಡೆದಿದೆ.  ಟೋಯಿಂಗ್ ಕಂಪನಿಯೊಂದರಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ 20 ರಿಂದ 44 ವರ್ಷದೊಳಗಿನವರ ಗುಂಪು ಮೋಜು ಮಸ್ತಿ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ 7 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳದಲ್ಲಿ ರಕ್ತದ ಕಲೆಗಳು ಇದ್ದು, ಎಲ್ಲೆಂದರಲ್ಲಿ ಶೂ ಮತ್ತಿತರ ವಸ್ತುಗಳು ಬಿದ್ದಿದ್ದವು. ಯುವತಿಯೊಬ್ಬಳ ತಲೆಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾರ್ಟಿ ನಡೆದ ಹಿಂಬದಿ ರೂಮಿನಲ್ಲಿ 38 ವರ್ಷದ ವ್ಯಕ್ತಿಯೊಬ್ಬ ಗುಂಡೇಟಿಗೆ ಬಲಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ನಾಲ್ಕು ಗನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ದಾಳಿಯನ್ನು ಒಬ್ಬ ವ್ಯಕ್ತಿ ನಡೆಸಿದ್ದಾನೋ ಇಲ್ಲವೇ ಇತರರು ಗನ್ ಬಳಕೆ ಮಾಡಿದ್ದಾರೋ ಎನ್ನುವ ಬಗ್ಗೆ ಮಾಹಿತಿ ನೀಡಲು ಪೊಲೀಸರು ನೀರಾಕರಿಸಿದ್ದಾರೆ. ಸಂಸ್ಥೆಯ ಗ್ಯಾರೇಜ್ ಆವರಣದಲ್ಲಿ ಬಾರ್ ಇತ್ತು. ಬಾರ್‍ನಲ್ಲಿ ಯಾವ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ನಾವು ಘಟನೆ ಕುರಿತಂತೆ ತನಿಖೆ ಕೈಗೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬ್ರೌನ್ ತಿಳಿಸಿದ್ದಾರೆ.

ಚಿಕಾಗೋದಲ್ಲಿ ಇತ್ತಿಚೆಗೆ ಇಂತಹ ಘಟನೆಗಳು ಹೆಚ್ಚುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸಿರುವ ಮೇಯರ್ ಲೋರಿ ಲೈಟ್‍ಫುಟ್ ಅವರು, ಗುಂಡಿನ ದಾಳಿಯ ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ಹಾಜರಾಗಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Facebook Comments