ಜಾಮೀನು ಕೋರಿ ಹೈಕೋರ್ಟ್ ಚಿದಂಬರಂ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.11- ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ ಬಂಧಿತರಾಗಿ ತಿಹಾರ್ ಜೈಲಿನಲ್ಲಿ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ತಮಗೆ ಜಾಮೀನು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು.

ಅಲ್ಲದೆ, ತಮಗೆ 14 ದಿನಗಳ ಕಸ್ಟಡಿಗೆ ಒಪ್ಪಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಮಗೆ ಜಾಮೀನು ನಿರಾಕರಿಸಿರುವ ಹಾಗೂ ಕಸ್ಟಡಿಗೆ ಒಪ್ಪಿಸಿರುವ ವಿಚಾರಣಾ ನ್ಯಾಯಾಲಯ ಈ ಎರಡು ತೀರ್ಪುಗಳ ವಿರುದ್ಧ ಈ ಮೂಲಕ ಚಿದಂಬರಂ ಕಾನೂನು ಸಮರ ಮುಂದುವರಿಸಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆ.21ರಂದು ಸಿಬಿಐ ಕಾಂಗ್ರೆಸ್ ಮುಖಂಡರೂ ಆದ 73 ವರ್ಷದ ಚಿದಂಬರಂ ಅವರನ್ನು ಬಂಧಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಸೆ.5ರಂದು ಆದೇಶ ನೀಡಿ ಸೆ.19ರ ವರೆಗೆ 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದೆ.  ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಇಂದು ಬೆಳಗ್ಗೆ ತಮ್ಮ ಕುಟುಂಬ ವರ್ಗದವರು ಮತ್ತು ಆಪ್ತರಿಗೆ ಟ್ವಿಟ್ ಮಾಡಿ ದೇಶದ ಆರ್ಥಿಕ ದುಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Facebook Comments