ವೈಯಕ್ತಿಕ ಲಾಭಕ್ಕಾಗಿ ಸಚಿವಾಲಯವನ್ನು ಬಳಸಿಲ್ಲ : ಚಿದು ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.23- ಈ ಹಿಂದೆ ತಾವು ಸಚಿವರಾಗಿದ್ದ ವೈಯಕ್ತಿಕ ಲಾಭಕ್ಕಾಗಿ ಹಣಕಾಸು ಸಚಿವಾಲಯವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯ ಭ್ರಷ್ಟಾಚಾರ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ದೆಹಲಿ ಹೈಕೋರ್ಟ್‍ಗೆ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಜಾಮೀನು ಮಂಜೂರಾತಿ ವಿರೋಧಿಸಿ ಸಿಬಿಐ ಸಲ್ಲಿಸಿರುವ ಅರ್ಜಿಗೆ ಹೊಸದಾಗಿ ಸ್ಪಷ್ಟೀಕರಣ ನೀಡಿರುವ ಚಿದಂಬರಂ, ತಾವು ಕೇಂದ್ರ ಸರ್ಕಾರದ ಸಚಿವಾಲಯವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕೈಟ್ ಅವರಿಗೆ ಈ ಕುರಿತು ಅಫಿಡೆವಿಟ್ ಸಲ್ಲಿಸಿರುವ ಚಿದಂಬರಂ, ತಮ್ಮ ವಿರುದ್ದ ಸಿಬಿಐ ಮಾಡಿರುವ ಇಂತಹ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ.

ಈಗಾಗಲೇ ತಮ್ಮ ವಿರುದ್ದ ಸಿಬಿಐ ಲುಕೌಟ್ ಸೆಕ್ಯುಲರ್ ಹೊರಡಿಸಿದೆ. ಹೀಗಿದ್ದರೂ ತಾವು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಮತ್ತು ಕಾನೂನು ನಿಯಮಗಳ ಉಲ್ಲಂಘನೆ ಕುರಿತು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಅವರು ತಿಳಿಸಿದ್ದಾರೆ.

ಐಎನ್‍ಎಕ್ಸ್ ಮೀಡಿಯ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಬಂಧಿತರಾಗಿರುವ ಕಾಂಗ್ರೆಸ್ ಧುರೀಣ ಚಿದಂಬರಂ ಸೆ.5ರಿಂದ ತಿಹಾರ್ ಜೈಲಿನಲ್ಲಿದ್ದಾರೆ.

Facebook Comments