ಸುಪ್ರೀಂ ಆದೇಶದ ಅಂಶಗಳನ್ನು ನೋಡಿ ವಿಚಲಿತನಾಗಿದ್ದೇನೆ : ಚಿದಂಬರಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.28- ಪೆಗಾಸಸ್ ಬೇಹುಗಾರಿಕೆ ಹಗರಣದ ತನಿಖಾ ಸಮಿತಿ ಸದಸ್ಯರಾಗಲು ಹಲವಾರು ಮಂದಿ ನಯವಾಗಿ ನಿರಾಕರಣೆ ತೋರಿಸಿದರು ಎಂಬ ವಿಷಯ ತಮ್ಮನ್ನು ವಿಚಲಿತರನ್ನಾಗಿ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಪೆಗಾಸಸ್ ಬೇಹುಗಾರಿಕೆ ಹಗರಣದಲ್ಲಿ ಹಲವಾರು ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ವಿಭಾಗೀಯ ಪೀಠ, ತನಿಖೆಗೆ ಮೂವರು ತಜ್ಞರನ್ನು ಒಳಗೊಂಡ ಸಮಿತಿ ರಚನೆ ಮಾಡಿದೆ. ಆ ಸಮಿತಿಗೆ ಸದಸ್ಯರಾಗಲು ಬಹಳಷ್ಟು ಮಂದಿ ನಯವಾಗಿಯೇ ನಿರಾಕರಿಸಿದರು ಎಂದು ನಿನ್ನೆ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

ಈ ಕುರಿತು ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಚಿಂದಬರಂ ಅವರು, ಸುಪ್ರೀಂಕೋರ್ಟ್ ಉಲ್ಲೇಖಿಸಿರುವ ಅಂಶ ನನ್ನನ್ನು ವಿಚಲಿತನಾಗಿ ಮಾಡಿದೆ. ತನಿಖಾ ಸಮಿತಿಯಲ್ಲಿ ಸದಸ್ಯರಾಗಲು ಬಹಳಷ್ಟು ಮಂದಿ ನಯವಾಗಿಯೇ ನಿರಾಕರಿಸಿದ್ದಾರೆ. ಆತ್ಮಸಾಕ್ಷಿ ಇರುವ ಭಾರತೀಯ ಪ್ರಜೆ ಸುಪ್ರೀಂಕೋರ್ಟ್‍ನ ಮನವಿಯನ್ನು ತಳ್ಳಿ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಭಾರತೀಯರು ಆಡಳಿತಕ್ಕೆ ಹೆದರಬಾರದು ಎಂದು ಮಹಾತ್ಮಗಾಂಧಿ ಅವರು ಪ್ರತಿಪಾದಿಸಿದ ಸಿದ್ಧಾಂತದೊಂದಿಗೆ ಪ್ರಯಾಣಿಸಿದ ನಾವು ಪೆಗಾಸಸ್ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.

Facebook Comments