ತಿಹಾರ್ ಜೈಲಿನಲ್ಲಿ ಚಿದು ಭೇಟಿಯಾದ ಅಜಾದ್ ಮತ್ತು ಪಟೇಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.18(ಪಿಟಿಐ)-ಕಾಂಗ್ರೆಸ್ ಹಿರಿಯ ಧುರೀಣರಾದ ಗುಲಾಂ ನಬಿ ಅಜಾದ್ ಮತ್ತು ಅಹಮದ್ ಪಟೇಲ್ ಇಂದು ಬೆಳಗ್ಗೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಮತ್ತು ಪಕ್ಷದ ನಾಯಕ ಪಿ.ಚಿದಂಬರಂ ಅವರನ್ನು ಭೇಟಿಯಾಗಿ ಅರ್ಧತಾಸು ಮಾತನಾಡಿದರು.

ಚಿದಂಬಪರಂ ಪುತ್ರ, ಉದ್ಯಮಿ ಮತ್ತು ಸಂಸದ ಕಾರ್ತಿ ಚಿರಂಬರಂ ಸಹ ಇವರ ಜೊತೆಗಿದ್ದರು. ಚರ್ಚೆ ವೇಳೆ ಕಾಶ್ಮೀರ, ಮುಂಬರುವ ಚುನಾವಣೆ ಮತ್ತು ದೇಶದ ಆರ್ಥಿಕ ಸ್ಥಿತಿ ಕುರಿತು ಸಮಾಲೋಚನೆ ನಡೆಸಿದರೆಂದು ಮೂಲಗಳು ತಿಳಿಸಿವೆ.

ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಲಂಚ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಸಂಬಂಧ ಸೆ.5ರಿಂದ ಚಿದಂಬರಂ ತಿಹಾರ್ ಜೈಲಿನಲ್ಲಿದ್ದಾರೆ. ಅವರು ಸೋಮವಾರ ಜೈಲಿನಲ್ಲೇ ತಮ್ಮ 74ನೇ ಜನ್ಮದಿನ ಆಚರಿಸಿಕೊಂಡಿದ್ದರು.

Facebook Comments