ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬಾಣಸಿಗ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ,ಆ.11- ಅನಾಥ ಶವಕ್ಕೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುವ ಮೂಲಕ ನಗರದ ಬಾಣಸಿಗರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ನಗರದಲ್ಲಿ ಅಲ್ಲಲ್ಲಿ ಓಡಾಡಿಕೊಂಡು ಯಾರೋ ಕೊಟ್ಟ ಕಾಫಿ, ಟೀ, ಬಿಸ್ಕೆಟ್ ಮತ್ತಿತರ ತಿನಿಸುಗಳನ್ನು ಸೇವಿಸಿ ಬದುಕು ಸಾಗಿಸುತ್ತಿದ್ದ ಅನಾಥ ವ್ಯಕ್ತಿಯೊಬ್ಬ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ವಿಷಯ ತಿಳಿದು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾರಸುದಾರರು ಇದ್ದಾರೆಯೇ ಎಂಬ ಬಗ್ಗೆ ಮಾಹಿತಿಗೆ ಮನವಿ ಮಾಡಿದ್ದರು.  ಶವ ಪಡೆಯಲು ಯಾರೂ ಬಾರದ ಕಾರಣ ನಿನ್ನೆ ಮಹಜರು ನಡೆಸಿ ಅಪ್ಪಯ್ಯನಕುಂಟೆಗೆ ಕೊಂಡೊಯ್ದು ಮಣ್ಣು ಮಾಡಲು ಸಿದ್ದತೆ ನಡೆಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸಮಾಜ ಸೇವಕ ವೃತ್ತಿಯಲ್ಲಿ ಬಾಣಸಿಗನಾಗಿರುವ ಹೊನ್ನಗಿರಿಯಪ್ಪನಹಳ್ಳಿ ಹೋಟೆಲ್ ರಾಮಣ್ಣ ದಾವಿಸಿ ತಮ್ಮ ಸಂಗಡಿಗರೊಂದಿಗೆ ಶಾಸ್ತ್ರೋಕ್ತವಾಗಿ ಅನಾಥನ ಶವ ಸಂಸ್ಕಾರ ಮಾಡಿದ್ದಾರೆ.

ಇದಕ್ಕೆ ನಗರ ಠಾಣೆಯ ಮುಖ್ಯಪೇದೆ ಅಶ್ವಥ್‍ರಾಜು, ಪೇದೆ ಗಂಗಾಧರ, ಜೆಸಿಬಿ ರಾಜಶೇಖರ್ ರೆಡ್ಡಿ, ಆ್ಯಂಬುಲೆನ್ಸ್ ಮುರುಳಿ, ಶಿವಕುಮಾರ್ ಸಾಕ್ಷಿಯಾದರು.

Facebook Comments