ಬೆತ್ತ ಹಿಡಿದು ಎಂಟ್ರಿ ಕೊಟ್ಟ ತಹಸೀಲ್ದಾರ್, ದಿಕ್ಕಾಪಾಲಾಗಿ ಓಡಿದ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ : ದಂಡಾಧಿಕಾರಿ ಬೆತ್ತ ಹಿಡಿದು ಮಾರುಕಟ್ಟೆ ಪ್ರವೇಶಿಸಿದಾಗ ಒಬ್ಬರಮೇಲೊಬ್ಬರಂತೆ ತರಕಾರಿ ಕೊಂಡುಕೊಳ್ಳುತಿದ್ದವರು ದಿಕ್ಕಾಪಾಲಾಗಿ ಓಡಿದರು!! ಹೌದು ಇದು ನಡೆದದ್ದು ಚಿಕ್ಕಬಳ್ಳಾಪುರ ನಗರದ ಬಿಬಿ.ರಸ್ತೆಯ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ನಗರದಲ್ಲಿ ಕೊರೊನ ಹಟ್ಟಹಾಸದಿಂದ ಸೀಲ್ ಡೌನ್ ಆಗಿದ್ದು ಪೊಲೀಸರು ನಗರಸಭೆ ಅಧಿಕಾರಿಗಳು ಎಷ್ಟು ಗೋಗರೆದು ಮನೆಗಳಿಂದ ಹೊರ ಬರಬಾರದೆಂದು ವಿನಂತಿಸಿದ್ದರೂ ಸೀಲ್ ಡೌನ್ ಆಗಿ ಎರಡು ದಿನಗಳಾದರೂ ಇದರ ಪರಿವೆಯೇ ಇಲ್ಲದೆ ಜನ ಮುಗಿ ಬಿದ್ದು ತರಕಾರಿ ಕೊಂಡಿಕೊಳ್ಳಲು ಮುಗಿ ಬಿದ್ದರು.

ಭಾನುವಾರದ ಇಂದು ಇದೇ ಪ್ರದೇಶದಲ್ಲಿ ಮಟನ್ ಹಾಗೂ ಚಿಕನ್ ಸೆಂಟರ್ ಗಳೂ ಇದ್ದು ಮಟನ್ ಹಾಗೂ ಚಿಕನ್ ಕೊಂಡುಕೊಳ್ಳುವವರೂ ಅಂಗಡಿಗಳ ಮುಂದೆ ಮುಗಿ ಬಿದ್ದು ಕೊಂಡುಕೊಳ್ಳುತಿದ್ದರು ಮಾದ್ಯಮದವರ ಮೂಲಕ ಮಾಹಿತಿ ತಿಳಿದುಕೊಂಡ ತಹಸೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ನಾಗ ಪ್ರಶಾಂತ್ ಬೆತ್ತ ಹಿಡಿದು ಮಾರುಕಟ್ಟೆ ಪ್ರವೇಶಿಸುತಿದ್ದಂತೆ ವಿವಿದ ಅಗತ್ಯ ಸಾಮಗ್ರಿಗಳಿಗಾಗಿ ಬಂದಿದ್ದ ಜನ ಓಡೊಡಿ ಮನೆ ಸೇರಿಕೊಂಡರು ಇತ್ತ ಬೈಕು ಸೇರಿದಂತೆ ಕಾರು ಮಾರುತಿ ವಾಹನಗಳ್ಲಿ ಅನಗತ್ಯವಾಗಿ ನಾಲ್ಕು ಐವರು ಬರುತಿದ್ದ ವಾಹನಗಳನ್ನು ತಡೆದು ಕಾರಣ ಕೇಳಿ ಸಮರ್ಪಕ ಉತ್ತರ ದೊರೆಯದಾಗ ಒಂದು ಬಿಗಿಯುತಿದ್ದಂತೆ ಮತ್ತೆ ಬರುವುದಿಲ್ಲ ಎಂದು ಅಂಗಲಾಚಿ ಪರಿಪರಿಯಾಗಿ ಬೇಡಿಕೊಂಡು ಮುಂದೆ ಸಾಗಿದರು.

ಇನ್ನು ಕೆಲ ಅಂಗಡಿಗಳ ಮಾಲೀಕರಿಗೂ ಸರಿಯಾದ ಪಾಠ ಮಾಡಿದ ನಾಗ ಪ್ರಶಾಂತ್ ನೀವಿ ಹೀಗಿ ಕಾನೂನು ಪರಿಪಾಲಿಸಿ ನಡೆಯಲಿಲ್ಲವಾದರೆ ನಿಮ್ಮ ಅಂಗಡಿಗಳನ್ನು ಸೀಜ್ ಮಾಡುವುದಾಗಿ ಎಚ್ಚರಿಸಿದರು ಅದೇ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಕ್ ಹಾಕದ ಕೆಲ ಅಂಗಡಿಗಳವರಿಗೆ ತಮ್ಮದೇ ಆದ ಶೈಲಿಯಲ್ಲಿ ಬುದ್ದಿ ಕಲಿಸಿದರು ಆಸ್ಪತ್ರೆ ಸೇರಿದಂತೆ ಔಷಧೀಯ ಕೊಂಡುಕೊಳ್ಳಲು ಬಂದವರಿಗೆ ವಿನಯವಾಗಿ ಇಬ್ಬಿಬ್ಬರು ಮನೆ ಬಿಟ್ಡುಬಾರದಂತೆ ಸೂಚಿಸಿದರು.

ಕಳೆದ ಎರಡು ದಿನಗಳಿಂದ ನಗರ ವ್ಯಾಪ್ತಿ ಪೂರಾ ಸೀಲ್ ಡೌನ್ ಆಗಿದ್ದು ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ತಾಲ್ಲೂಕು ದಂಡಾಧಿಕಾರಿಗಳು ನಗರಸಭೆ ಪೌರಾಯುಕ್ತರು ವಾರ್ಡುಗಳಿಗೇ ಅಗತ್ಯ ಸಾಮಗ್ರಿಗಳನ್ನು ತಂದು ಕೊಡುವ ವ್ಯವಸ್ಥೆ ಮಾಡಿದ್ದರೂ ಇದಾವುದಕ್ಕೂ ಸೊಪ್ಪು ಹಾಕದೆ ಇರುವುದರಿಂದ ಇಂದು ತಾಲ್ಲೂಕು ದಂಡಾಧಿಕಾರಿಗಳೆ ಬಿತ್ತ ಹಿಡಿದು ನಗರ ವ್ಯಾಪ್ತಿ ಪೂರಾ ಅಡ್ಡಾಡಿ ಜನರಿಗೆ ಬುದ್ದಿ ಹೇಳಿ ಬಂದರು.

Facebook Comments

Sri Raghav

Admin