ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 240ಕೋಟಿ ಆಸ್ತಿ-ಪಾಸ್ತಿ ಹಾನಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಆ.16- ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 240ಕೋಟಿ ಆಸ್ತಿ-ಪಾಸ್ತಿ ಹಾನಿಯಾಗಿರುವುದನ್ನು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು. ಅತಿವೃಷ್ಟಿಯಿಂದಾಗಿ 950ಕಿ.ಮೀ ವಸ್ತುಗಳು ಹಾನಿಯಾಗಿದೆ.

159 ಸೇತುವೆಗಳು, 35ಕೆರೆ-ಕಟ್ಟೆ, 2065ವಿದ್ಯುತ್ ಕಂಬಗಳು, 34ಬಿಎಸ್‍ಎನ್‍ಎಲ್ ಟವರ್, 1565 ಹೆಕ್ಟೇರ್ ಬೆಳೆ ಹಾನಿ, 1654 ಮನೆಗಳು ಹಾನಿ, ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದರು.

ಕೊಟ್ಟಿಗೆಹಾರದಿಂದ ಚಾರಮುಡಿ ಘಾಟ್ ರಸ್ತೆಯಲ್ಲಿ 60ಕಡೆ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಕೆಲವು ಕಡೆ ಬಂಡೆಗಳು ಉರುಳಿ ಬಿದ್ದಿವೆ. 500ಅಡಿ ಆಳಕ್ಕೆ ರಸ್ತೆ ಕುಸಿತವಾಗಿದೆ.  ಹಾಲೆಖಾನ್, ಹೊರಹಟ್ಟಿ, ಮಲೆಮನೆ, ದುರ್ಗದಹಳ್ಳಿ ಈಭಾಗದಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದ್ದು, ಇಲ್ಲಿರುವ ಜನರನ್ನು ಸ್ಥಳಾಂತರಿಸಿ ಪುರ್ನರವಸತಿ ಕಲ್ಪಿಸಲು ಚಿಂತನೆ ನಡೆಸಲಾಗುವುದಾಗಿ ತಿಳಿಸಿದರು.

ಸಂತ್ರಸ್ತರು ಬಟ್ಟೆ-ಬರೆ ಪೂರೈಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿನಿರಾಶ್ರಿತ ಕುಟುಂಬಗಳಿಗೆ 10ಸಾವಿರ ನೀಡಲಾಗಿದೆ ಎಂದು ತಿಳಿಸಿದರು.
1954ಮನೆಗಳು ಹಾನಿಯಾಗಿದ್ದು, ಇದರಲ್ಲಿ ತೀವ್ರ ಪ್ರಮಾಣದಲ್ಲಿ ಹಾನಿಯಾದ 5ಲಕ್ಷ, ಭಾಗಶಃ ಹಾನಿಯಾದ ಮನೆಗಳಿಗೆ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯಕ್ಕೆ 5ಸಾವಿರ ಮನೆ ಬಾಡಿಗೆಯಲ್ಲಿರುವಂತೆ ಸರ್ಕಾರ ಹೇಳಿದೆ.

ಈ ಬಗ್ಗೆ ಆದೇಶ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬಾಬಾಬುಡನಗಿರಿ, ಕೆಮ್ಮನಗುಂಡಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಈ ಗಿರಿಶ್ರೇಣಿಗಳಲ್ಲಿ ಮಣ್ಣು ಕುಸಿತವಾಗಿದ್ದು, ರಸ್ತೆ ರಿಪೇರಿ ನಡೆಯುತ್ತಿದ್ದು, ಆ. 30ರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.

ಚಾರ್ಮುಡಿ ಘಾಟ್, ಕೊಟ್ಟಿಗೆಹಾರದಿಂದ ಮಂಗಳೂರಿಗೆ ಹೋಗುವ ರಸ್ತೆಯನ್ನು ಮುಂದಿನ ತಿಂಗಳು ಸೆ. 14ರವರೆಗೆ ಸಂಚಾರ ಬಂದ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವಥಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕುಮಾರ್ ಪ್ರತಿಕಾಗೋಷ್ಠಿಯಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬಗ್ಗೆ ವರದಿ ನೀಡಿದರು.

Facebook Comments