ಜಮೀನು ವಿವಾದ : ಗುಂಡು ಹಾರಿಸಿ ವ್ಯಕ್ತಿಯ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು.ಆ.11- ಜಮೀನು ನಡುವಿನ ವಿವಾದ ಗುಂಡುಹಾರಿಸಿ ಹತ್ಯೆ ಮಾಡುವಲ್ಲಿ ಅಂತ್ಯವಾಗಿರುವ ಘಟನೆ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಸುರೇಶ್(44) ಗುಂಡಿಗೆ ಬಲಿಯಾದ ವ್ಯಕ್ತಿ. ರಾಘವೇಂದ್ರ ಹಾಗೂ ಸುರೇಶ್ ಇಬ್ಬರೂ ಕಾಫಿ ತೋಟದ ಮಾಲೀಕರಾಗಿದ್ದಾರೆ.

ಜಮೀನಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಇವರ ನಡುವೆ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ಉಂಟಾದ ಜಗಳದಲ್ಲಿ ಆಕ್ರೋಶಗೊಂಡ ರಾಘವೇಂದ್ರ ಸುರೇಶ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ನಿನ್ನೆ ಬೆಳಗ್ಗೆ 8 ಗಂಟೆ ಸಮಯದಲ್ಲಿ ತಮ್ಮ ಮನೆಯ ಹಸುವು ಕಾಣೆಯಾಗಿದ್ದರಿಂದ ಅದನ್ನು ಹುಡುಕಿಕೊಂಡು ಸುರೇಶ್, ಪಕ್ಕದ ರಾಘವೇಂದ್ರ ಅವರ ಕಾಫಿ ತೋಟದ ಬಳಿ ಹೋಗಿದ್ದಾಗ, ಈತನಿಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತವಾಗಿದೆ.

ಈ ನಡುವೆ ರಾಘವೇಂದ್ರ ತಲೆಮರೆಸಿಕೊಂಡಿದ್ದು, ಮತ್ತಷ್ಟು ಸಂಶಯಗನ್ನು ಹುಟ್ಟು ಹಾಕಿದೆ. ಗುಂಡು ಹಾರಿಸಿ ಕೊಲೆ ಮಾಡಿರುವುದರಿಂದ ರಾಘವೇಂದ್ರನಿಗೆ ಗನ್ ಹೇಗೆ ದೊರೆಯಿತು, ಲೈಸೆನ್ಸ್ ಇತ್ತೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.  ಅಲ್ದೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments