ಕೊರೋನಾ ಲೆಕ್ಕಿಸದೆ ಕಾಫಿನಾಡಿಗೆ ಹರಿದುಬಂದ ಪ್ರವಾಸಿಗರ ದಂಡು, ಜನರಲ್ಲಿ ಹೆಚ್ಚಿದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

# ಉಮೇಶ್ ಕುಮಾರ್, ಚಿಕ್ಕಮಗಳೂರು
ಲಾಕ್‍ಡೌನ್‍ನಿಂದ ನಿಶಬ್ದವಾಗಿದ್ದ ಕಾಫಿ ನಾಡು ಚಿಕ್ಕಮಗಳೂರು ಈಗ ಕೊರೋನವನ್ನು ಲೆಕ್ಕಿಸದೆ ಜನ ಮೋಜು-ಮಸ್ತಿ ಮಾಡಲು ಮುಂದಾಗಿದ್ದು ಜಿಲ್ಲಾಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದು ಜಿಲ್ಲಾಯ ಜನ ಆತಂಕಗೊಂಡಿದ್ದಾರೆ.

ಕಾಫಿನಾಡಿನಲ್ಲಿ ಗಿರಿಶ್ರೇಣಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬಂದಿತ್ತು ಕೋವಿಡ್- 19ರ ಪರಿವೇ ಇಲ್ಲದೆ ಪ್ರವಾಸಿಗರು ಎಲ್ಲಾದರಲ್ಲಿ ಸಂಚರಿಸುತ್ತಿದ್ದು ಕಂಡುಬಂದಿತು.

ನೂರಾರು ಕೊರೋನಾ ಪ್ರಕರಣಗಳಿರುವ ಜಿಲ್ಲಾಗಳಿಂದ ಎಗ್ಗಿಲ್ಲದೆ ಪ್ರವಾಸಿಗರು ಕಾಫಿ ನಾಡಿನತ್ತ ಧಾವಿಸುತ್ತಿದ್ದು ಜಿಲ್ಲಾಯ ಜನರಲ್ಲಿ ಭಯ ಶುರುವಾಗಿದೆ ಉಡುಪಿ, ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲಾಯ ಧಾರ್ಮಿಕ ಕ್ಷೇತ್ರಗಳ ಜೊತೆ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಲತ್ತಿಗಿರಿ ಫಾಲ್ಸ್, ಕೆಮ್ಮಣ್ಣಗುಂಡಿ, ಚಾರ್ಮುಡಿ ಘಾಟ್, ದೇವರಗುಡ್ಡ ಸೇರಿದಂತೆ ಜಿಲ್ಲಾಯ ವಿವಿಧ ತಾಣಗಳಿಗೆ ಪ್ರವಾಸಿಗರು ಎಗ್ಗಿಲ್ಲದೆ ಬರುತ್ತಿದ್ದು ಪ್ರವಾಸಿಗರನ್ನು ಕಂಡು ಕಾಫಿನಾಡಿನ ಜನ ಕಂಗಾಲಾಗಿದ್ದಾರೆ.

ಪಶ್ಚಿಮಘಟ್ಟ ಸಾಲುಗಳಿಗೆ ಸಾಗಲು ಕೈಮರ ಚೆಕ್‍ಪೋಸ್ಟ್ ಬಳಿ ನಸುಕಿನಿಂದಲೇ ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೆಳಿಗ್ಗೆ 6 ಗಂಟೆಯಿಂದ ಪ್ರವಾಸಿಗರ ವಾಹನಗಳು ಸಾಗಲು ಅವಕಾಶ ನೀಡಲಾಗಿತ್ತು. ಭಾನುವಾರವಾದ ನಿನ್ನೆ 880 ಕಾರುಗಳು, 900 ದ್ವಿಚಕ್ರವಾಹನಗಳು, 24 ಟಿಟಿ, ಎರಡು ಮಿನಿ ಬಸ್‍ಗಳು, ಗಿರಿ ಪ್ರದೇಶ ಗುಡ್ಡ ಏರಿದ್ದು, ಎಲ್ಲಾದರಲ್ಲಿ ವಾಹನಗಳನ್ನು ನಿಲ್ಲಿಸಿ ಗುಡ್ಡಗಳ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಪ್ರವಾಸಿಗರಲ್ಲಿ ಬಹುತೇಕ ಪ್ರವಾಸಿಗರು ಮುಖಗವಸು ಧರಿಸಿರಲಿಲ್ಲ. ಸಾಮಾಜಿಕ ಅಂತರದ ಮಾತು ಇಲ್ಲವೇ ಇಲ್ಲ. ಗುಂಪು ಗುಂಪಾಗಿ ನಿಂತು ಪ್ರಕೃತಿ ವೀಕ್ಷಿಸುತ್ತಿದ್ದರು.ಪಶ್ಚಿಮಘಟ್ಟ ಸಾಲಿನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಮಂಜು ಮುಸುಕಿತ್ತು ಚಳಿ ವಾತಾವರಣ ಇತ್ತು ಆಗಿಂದಾಗ್ಗೆ ತುಂತುರುಮಳೆ ಜಿನುಗುತ್ತಿತ್ತು. ಪ್ರವಾಸಿಗರು ಪ್ರಕೃತಿಯ ರುದ್ರರಮಣೀಯ ಕಂಡು ರೋಮಾಂಚನಗೊಂಡರು.

ತಾಲೂಕಿನ ಗಿರಿ ಶ್ರೇಣಿಯಲ್ಲಿ ಬರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿದರ್ಗಾ, ಹೊನ್ನಮನ ಹಳ್ಳ, ಮಾಣಿಕ್ಯಧಾರಾ, ಕೆಮ್ಮಣ್ಣಗುಂಡಿ, ಅಬ್ಬಿ ಫಾಲ್ಸ, ಕಲ್ಲತ್ತಗಿರಿ ಸೇರಿದಂತೆ ಅನೇಕ ಕಡೆ ಪ್ರವಾಸಿಗರ ದಂಡು ಕಂಡುಬಂದಿತು.

ವೀಕ್ಷಣಾ ಸ್ಥಳಗಳಲ್ಲಿ ಪ್ರವಾಸಿಗರು ಅಂತರ ಕಾಯ್ದುಕೊಳ್ಳುವುದಿಲ್ಲ ಎಲ್ಲಾದರಲ್ಲಿ ಉಗುಳುತ್ತಾರೆ. ಸ್ಥಳೀಯರಿಗೆ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಮುಳ್ಳಯ್ಯನಗಿರಿ ತಪ್ಪುಲು ರಕ್ಷಣಾ ವೇದಿಕೆ ಕಾರ್ಯದರ್ಶಿ ಗುರುವೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ಜಿಲ್ಲಾಗೆ ಪ್ರವಾಸಿಗರನ್ನು ನಿರ್ಬಂಧಿಸಬೇಕು, ಪೋಲೀಸರನ್ನು ನಿಯೋಜಿಸಬೇಕು, ಮುಖಗವಸು ಧರಿಸದ, ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಬೇಕು, ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶ್ರೀರಾಮಸೇನೆ, ಬಜರಂಗದಳ, ವಟದೇಮಾತರಂ ಟ್ರಸ್ಟ್ ಕಾರ್ಯಕರ್ತರು ತಾಲೂಕಿನ ಕೈಮರದ ಚೆಕ್‍ಪೋಸ್ಟ್ ಬಳಿ ನಿಂತು ಪ್ರವಾಸಿಗರೇ ಜಿಲ್ಲಾಗೆ ಬಾರದಿರಿ ಎಂದು ಬಿತ್ತಿಪತ್ರ ಪ್ರದರ್ಶಿಸಿದ್ದರು ಪ್ರವಾಸಿಗರಿಂದ ಚಿಕ್ಕಮಗಳೂರು ಉಳಿಸಿ ಘೋಷವಾಕ್ಯದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಆದರೂ ಜಿಲ್ಲಾಗೆ ಬರುವವರ ಸಂಖ್ಯೆ ಏರುತ್ತಲೇ ಇದೆ.

ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಜಿಲ್ಲಾಯಲ್ಲಿ ಏರುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದು ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರವಾಸಿಗರಿಗೆ ಕೆಲವು ನಿರ್ಬಂಧನೆಗಳನ್ನು ವಿಧಿಸುವ ಅವಶ್ಯಕತೆ ಇದೆ.

ಜಿ¯್ಲÉಗೆ ಪ್ರವಾಸಿಗರು ಬರಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಅವಶ್ಯಕ ಮಾಡಿ ಇಂತಿಷ್ಟೇ ಜನರು ಬರಬೇಕು ಎಂದು ಪಾಸ್ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

Facebook Comments