ಕಾಫಿ ನಾಡಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಜೂ.13- ಕಾಫಿ ನಾಡು ಚಿಕ್ಕಮಗಳೂರು ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಪ್ರಮುಖವಾಗಿರುವ ನಾಲ್ಕು ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಟ್ರಾಫಿಕ್ಲೀ ಪೊಸರು ರಸ್ತೆಗಿಳಿದು ಸಂಚರಿಸುತ್ತಿರುವ ಬೈಕ್ ಸವಾರರನ್ನು ಅಡ್ಡಹಾಕಿ ದಾಖಲೆ ಕೇಳಿ ದಂಡ ವಸೂಲಿ ಮಾಡುವುದನ್ನು ಬಿಟ್ಟರೆ ಪಾರ್ಕಿಂಗ್ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ನಗರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇದ್ದು, ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಇದೆ ಎನ್ನಲಾಗಿದೆ. ಇರುವ ಸಿಬ್ಬಂದಿಯನ್ನು ಊರಿನ ಹೊರವಲಯದಲ್ಲಿ ಎಎಸ್‍ಐ ಜತೆ ಇಬ್ಬರು ಪೊಲೀಸರನ್ನು ನಿಲ್ಲಿಸಿ ದಂಡ ವಸೂಲಿ ಮಾಡಲು ನೇಮಿಸಿದ್ದಾರೆ.

ಪ್ರವಾಸಿಗರ ವಾಹನಗಳ ಜತೆ ಸ್ಥಳೀಯರ ವಾಹನಗಳು ರಸ್ತೆಯಲ್ಲಿಯೇ ನಿಲ್ಲುವುದರಿಂದ ಟ್ರಾಫಿಕ್ ಜಮ್ ಆಗಿ ಜನತೆ ತೊಂದರೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಪಾಲಿಸದ ಕಾರಣ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸುವಲ್ಲಿ ಪೆÇಲೀಸರು ವಿಫಲರಾಗಿದ್ದಾರೆ.

ಎಂಜಿ ಮತ್ತು ಐಜಿ ರಸ್ತೆಗಳಲ್ಲಿ ಡಬ್ಬಲ್ ಪಾರ್ಕಿಂಗ್ ಮಾಡಿದಾಗ ರಸ್ತೆ ಜಮ್ ಆಗಿ ಕಿರಿಕಿರಿ ಉಂಟಾಗುತ್ತಿದೆ. ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ದಿನ ಬಿಟ್ಟು ದಿನ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆ ಇದ್ದು, ಸ್ಥಳೀಯರು ಇದನ್ನು ಪಾಲಿಸದೆ ತಮ್ಮ ಮನೆ ಮುಂದೆ ವಾಹನವನ್ನು ಶಾಶ್ವತವಾಗಿ ನಿಲ್ಲಿಸಿರುವುದರಿಂದ ಬೇರೆ ಊರಿನಿಂದ ಬಂದವರು ಅದೇ ವಾಹನದ ಪಕ್ಕ ನಿಲ್ಲಿಸಿ ಎಷ್ಟೋ ಬಾರಿ ಪೊಲೀಸರಿಗೆ ದಂಡ ಕಟ್ಟಿದ್ದಾರೆ.

ಮೊದಲು ಸ್ಥಳೀಯರು ತಮ್ಮ ವಾಹನಗಳನ್ನು ರಸ್ತೆಯ ಯಾವ ಬದಿಯಲ್ಲಿ ಯಾವ ದಿನ ವಾಹನ ನಿಲ್ಲಿಸಬೇಕು ಎಂದು ನಿಲ್ಲಿಸಿದರೆ ಅರ್ಧ ಟ್ರಾಫಿಕ್ ಸರಿಯಾಗುತ್ತದೆ.

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಟ್ರಾಫಿಕ್ಲೀ ಪೊಸರು ಒಂದು ದಿನ ಮಾತ್ರ ಸೂಚನೆ ಕೊಟ್ಟು ಸುಮ್ಮನಾಗಿದ್ದಾರೆ.
ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಸ್ತೆ ನಿಯಮಗಳನ್ನು ಪಾಲಿಸದೆ ಇದ್ದರೆ ಪಾದಚಾರಿಗಳಿಗೆ ವಾಹನ ಸವಾರರಿಗೆ ಪ್ರತಿ ದಿನ ಕಿರಿಕಿರಿ ತಪ್ಪಿದ್ದಲ್ಲ.

ಪೊಲೀಸರು ಈಗಲಾದರೂ ಎಚ್ಚೆತ್ತು ವ್ಯವಸ್ಥಿತ ಪಾರ್ಕಿಂಗ್ ಬಗ್ಗೆ ಗಮನ ಹರಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ