ಬಸ್‍ನಲ್ಲಿ ಉಸಿರುಗಟ್ಟಿ ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಜೂ.16- ಶಾಲಾ ಚಾಲಕನ ನಿರ್ಲಕ್ಷ್ಯದಿಂದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ದುಬೈನ ಅಲ್ ಕ್ಯೂಜ್‍ನಲ್ಲಿ ನಡೆದಿದೆ.

ಘಟನೆ ವಿವರ: ಅಲ್‍ಕ್ಯೂಜ್‍ನ ಪ್ರತಿಷ್ಠಿತ ಖಾಸಗಿ ಶಾಲೆಯ ಕೇರಳ ಮೂಲದ ವಿದ್ಯಾರ್ಥಿ ಮೊಹಮ್ಮದ್ ಫಾರಾನ್ ಫೈಸಲ್ ಬಸ್‍ನ ಕೊನೆಯ ಸೀಟಿನಲ್ಲಿ ಮಲಗಿ ನಿದ್ರಿಸಿದ್ದಾನೆ, ಅದನ್ನು ಮರೆತ ಶಾಲಾ ಚಾಲಕ ಬಾಗಿಲನ್ನುಲಾಕ್ ಮಾಡಿಕೊಂಡು ಹೋಗಿದ್ದಾನೆ.

ಫಾರಾನ್ ಮನೆಗೆ ಬರದಿದ್ದರಿಂದ ಆತನ ಫೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊನೆಗೆ ಶಾಲಾ ವಾಹನದಲ್ಲಿ ಬಂದು ನೋಡಿದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಲಾ ಆಡಳಿತ ಮಂಡಳಿ, ಚಾಲಕನ ವಿರುದ್ಧ ಕ್ರಮಕೈಗೊಂಡಿದ್ದಾರೆ.

2014ರಲ್ಲಿ ಅಲ್ ವ್ಯೂರೋಡ್ ಅಕಾಡೆಮಿ ಶಾಲೆಯ ವಾಹನ ಚಾಲಕನ ಅಜಾಗರೂಕತೆಯಿಂದ 1 ತರಗತಿಯ ವಿದ್ಯಾರ್ಥಿ ಉಸಿರುಗಟ್ಟಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲ, ಬಸ್ ಚಾಲಕ, ಸೂಪರ್‍ವೈಸರ್‍ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತಲ್ಲದೆ, ಮಗುವಿನ ಫೋಷಕರಿಗೆ 1 ಲಕ್ಷ ದಿರಾಮ್ಸ್ (ದುಬೈನ ಕರೆನ್ಸಿ) ಪರಿಹಾರ ಕೊಡಿಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ