ಮಿನಿಗೂಡ್ಸ್ ವಾಹನ ಹರಿದು ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು,ಜೂ.25 – ಆಟವಾಡುತ್ತಿದ್ದ ಮಗುವಿನ ಮೇಲೆ ಮಿನಿಗೂಡ್ಸ್ ವಾಹನ ಹರಿದಿದ್ದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರಠಾಣೆ ವ್ಯಾಪ್ತಿಯ ಲಾಲ್ಬಂದ್ ಬೀದಿಯಲ್ಲಿ ನಡೆದಿದೆ. ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ನಿವಾಸಿ ಮಹಮ್ಮದ್ ಸಾದಿಕ್ ಅವರ ಮಗು ಮಾಯಿಯ(2) ಮೃತಪಟ್ಟ ದುರ್ದೈವಿ.

ಮಹಮ್ಮದ್ ಸಾಧಿಕ್ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಅತ್ತೆ ಮನೆಗೆ ಬಂದಿದ್ದರೂ. ಮನೆಯೊಳಗೆ ಆಟವಾಡುತ್ತಿದ್ದ ಮಗು ಚೆಂಡು ಮನೆಯಿಂದಾಚೆ ಹೋಗಿದ್ದು, ಅದನ್ನು ಎತ್ತಿಕೊಳ್ಳಲು ಮಗು ಅತ್ತ ಧಾವಿಸುತ್ತಿದ್ದಂತೆ ಗೂಡ್ಸ್ ವಾಹನ ಬಂದು ಡಿಕ್ಕಿ ಹೊಡೆದಿದೆ.

ರಸ್ತೆಯಲ್ಲಿದ್ದವರು ಕೂಡಲೇ ಕೂಗಿಕೊಂಡಾಗ ಚಾಲಕ ತಕ್ಷಣ ಬ್ರೇಕ್ ಹಾಕಿ ಹಿಮ್ಮುಖವಾಗಿ ಬಂದಿದ್ದರಿಂದ ವಾಹನ ಮತ್ತೆ ಮಗುವಿನ ತಲೆ ಮೇಲೆ ಹರಿದು ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಚಾಲಕ ಫೈರೋಜ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ಪಿಎಸ್‍ಐ ಮಹೇಶ್ ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments