ಫೇಸ್‍ಬುಕ್‍ ಸಹಾಯದಿಂದ ಕ್ಯಾನ್ಸಲ್ ಆಯ್ತು ಅಪ್ರಾಪ್ತ ಬಾಲಕಿಯ ಮದುವೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.28- ನಗರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಗೆ ಪೋಷಕರು ಮದುವೆ ನಿಶ್ಚಯ ಮಾಡಿರುವ ಮಾಹಿತಿ ಪಡೆದ ಜಯಪುರ ಠಾಣೆ ಪೊಲೀಸರು ಬಾಲಕಿ ಮನೆಗೆ ಖುದ್ದು ತೆರಳಿ ಪೋಷಕರಿಗೆ ಬುದ್ದಿವಾದ ಹೇಳಿ ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಯಸ್ಸಿಗೆ ಮದುವೆ ಇಷ್ಟವಿಲ್ಲವೆಂದು ಬಾಲಕಿ ಪೋಷಕರಿಗೆ ಹೇಳಿದ್ದರೂ ಮಗಳ ಮಾತನ್ನು ಲೆಕ್ಕಿಸದೆ ಇದೇ 31ರಂದು ಮದುವೆ ನಿಶ್ಚಯಮಾಡಿದ್ದರು.  ಬಾಲಕಿ ಬೇರೆ ದಾರಿಯಿಲ್ಲದೆ ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಯೋಚಿಸಿ ಸ್ನೇಹಿತೆಯ ಫೇಸ್‍ಬುಕ್‍ನಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಮದುವೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾಳೆ.

ನೀವು ನಮ್ಮ ಪೋಷಕರಿಗೆ ಬುದ್ದಿಮಾತು ಹೇಳಿ. ನನ್ನ ಮದುವೆಯನ್ನು ನಿಲ್ಲಿಸುವಂತೆ ಕೋರಿದ್ದಾಳೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಭಾಸ್ಕರ್‍ರಾವ್ ಅವರು ಕುಡಲೇ ಮೈಸೂರಿನ ಜಯಪುರ ಪೊಲೀಸರಿಗೆ ಮಾಹಿತಿ ನೀಡಿ ಖುದ್ದು ಬಾಲಕಿ ಮನೆಗೆ ಹೋಗಿ ಪೋಷಕರಿಗೆ ತಿಳುವಳಿಕೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಜಯಪುರ ಠಾಣೆ ಪೊಲೀಸರು ಬಾಲಕಿ ಮನೆಗೆ ತೆರಳಿ ಪೋಷಕರ ಮನವೊಲಿಸಿ ಬಾಲ್ಯವಿವಾಹ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments