ನಾಲ್ಕು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬಾಂಡಾ(ಉ.ಪ್ರ), ಅ.22-ತನ್ನ ನಾಲ್ಕು ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ತಾನೂ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಲಲಿತ್‍ಪುರ ಜಿಲ್ಲೆಯಲ್ಲಿ ನಡೆದಿದೆ. ಮದಾಂಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ದಾಣ ಕುದರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಎರಡು ವರ್ಷದ ಹೆಣ್ಣು ಮಗು, ಮೂವರು ಗಂಡು ಮಕ್ಕಳೊಂದಿಗೆ ಇಂದು ಮುಂಜಾನೆ 27 ವರ್ಷದ ವಿಮಲಾ ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಸ್‍ಪಿ ಬೇಗ್ ತಿಳಿಸಿದ್ದಾರೆ.

Facebook Comments