ಕೋವಿಡ್ ಚಿಕಿತ್ಸೆ ನಂತರ ಮಕ್ಕಳಲ್ಲಿ ಮೆಸ್ಸಿ ಸಮಸ್ಯೆ, ನಿರ್ಲಕ್ಷಿಸಿದರೆ ಪ್ರಾಣಕ್ಕೆ ಕುತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ವಯಷ್ಕರಲ್ಲಿ ಕೋವಿಡ್ ಚಿಕಿತ್ಸೆ ನಂತರ ಬ್ಲಾಕ್ ಫಂಗಸ್ ಕಾಡುವಂತೆ ಮಕ್ಕಳಲ್ಲಿ ಮೆಸ್ಸಿ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆಗೆ ಹೊಸ ಸವಾಲು ತಂದೊಡ್ಡಿದೆ. ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆದು ಸುಧಾರಿಸಿಕೊಂಡ ಬಳಿಕ ಮಕ್ಕಳಲ್ಲಿ ಅತೀವ ಸುಸ್ತು, ಜ್ವರ, ಹೊಟ್ಟೆ ನೋವು, ಬಳಲಿಕೆಯಂತಹ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯಿಸದೆ ಮಕ್ಕಳ ತಜ್ಞ ವೈದ್ಯರ ಬಳಿಕ ಕರೆದುಕೊಂಡು ಹೋಗಬೇಕಿದೆ. ಅದರಲ್ಲೂ ಮಕ್ಕಳ ತಜ್ಞ ವೈದ್ಯರ ಬಳಿಯೇ ಕರೆದುಕೊಂಡು ಹೋಗುವುದು ಸೂಕ್ತವಾಗಿದೆ.

ಕೊರೊನಾ ಚಿಕಿತ್ಸೆಯಿಂದ ಅಡ್ಡ ಪರಿಣಾಮವಾಗಿ ಮಕ್ಕಳಲ್ಲಿ ಕೆಲವೊಮ್ಮೆ ಮೆಸ್ಸಿ (ಮಲ್ಟಿಸಿಸ್ಟಮ್ ಇಫ್ಲಮೆಂಟ್ರಿ ಸಿಂಡ್ರೋಮ್) ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈವರೆಗೂ ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬಹು ಅಂಗಾಂಗ ಉರಿಯೂತದ ಈ ಆರೋಗ್ಯ ಸಮಸ್ಯೆ ಕೆಲವೊಮ್ಮೆ ಪ್ರಾಣಪಾಯ ಉಂಟು ಮಾಡುವ ಸಾಧ್ಯತೆಯೂ ಇದೆ.
ಕೊರೊನಾ ಗುಣಮುಖವಾದ ಎರಡು ಅಥವಾ ಮೂರನೇ ವಾರದ ಬಳಿಕ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದಾಗಿ ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.

ಕೊರೊನಾ ಪೀಡಿತ ಮಕ್ಕಳ ಚಿಕಿತ್ಸೆಯ ಬಗ್ಗೆ ರಾಜ್ಯದಿಂದಾಗಲಿ, ಕೇಂದ್ರದಿಂದಾಗಲಿ ಈವರೆಗು ಸರಿಯಾದ ಪ್ರಮಾಣಿತ ನಿರ್ವಹಣಾ ವ್ಯವಸ್ಥೆ ಯನ್ನು (ಎಸ್ ಓ ಪಿ) ಜಾರಿಗೊಳಿಸಿಲ್ಲ. ಹಿರಿಯರಿಗೆ ನೀಡುವ ಚಿಕಿತ್ಸೆ ಪದ್ಧತಿಯ ಸಮಾನಾಂತರ ಅಂಶಗಳನ್ನೇ ಮಕ್ಕಳ ಚಿಕಿತ್ಸೆಗೂ ಮುಂದುವರೆಸಲಾಗುತ್ತಿದೆ. ಹಾಹಾಗಿ ಕೆಲವು ಮಕ್ಕಳಲ್ಲಿ ಅಡ್ಡ ಪರಿಣಾಮಗಳಾಗಿವೆ ಎಂದು ಹೇಳಲಾಗಿದೆ.

ಮೂರನೆ ಅಲೆ ಮಕ್ಕಳಿಗೆ ತೊಂದರೆಯುಂಟು ಮಾಡಲಿದೆ ಎಂಬ ಆತಂಕವನ್ನು ವ್ಯಾಪಕವಾಗಿ ಬಿತ್ತಲಾಗಿದೆ. ಅದನ್ನು ನಿಭಾಯಿಸಲು ಸರ್ಕಾರ ಸೂಕ್ತ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವುದಾಗಿಯೂ ಪ್ರಚಾರ ಮಾಡಲಾಗುತ್ತಿದೆ. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಐಸಿಯು, ಎಚ್ ಡಿ ಯು ಬೆಡ್ ಗಳ ಚಿಕಿತ್ಸಾ ಘಟಕಗಳ ಸ್ಥಾಪನೆ, ಮಕ್ಕಳ ತಜ್ಞರ ನಿಯೋಜನೆಯಲ್ಲಿ ಸರ್ಕಾರ ದಾಪುಗಾಲಿಟ್ಟು ತಯಾರಿ ಮಾಡಿಕೊಳ್ಳುತ್ತಿದೆ. ಆದರೆ ಚಿಕಿತ್ಸೆಗೆ ಪ್ರಮುಖವಾಗಿ ಬೇಕಾದ ಎಸ್ಒಪಿಯನ್ನೇ ಪ್ರಕಟಿಸಿಲ್ಲ.

ಕೊರೊನಾ ಹೊಸ ಹೊಸ ಸವಾಲುಗಳನ್ನು ತಂದೊಡ್ಡುತ್ತಿದೆ. ಕೊರೊನಾ ಮೂರನೆ ಅಲೆ, ಡೆಲ್ಟಾ, ಡೆಲ್ಟಾ ಪ್ಲಸ್, ಬ್ಲಾಕ್ ಫಂಗಸ್, ಮೆಸ್ಸಿ-ಸಿಯಂತಹ ಸಮಸ್ಯೆಗಳು ಜನರನ್ನು ಭಯ ಭೀತರನ್ನಾಗಿ ಮಾಡುತ್ತಿವೆ.

ಆರೋಗ್ಯ ಕ್ಷೇತ್ರಕ್ಕೂ ದೊಡ್ಡ ಸವಾಲಾಗಿದೆ. ಈಗಾಗಲೇ ರಾಜ್ಯದಲ್ಲಿ ಸಾವಿರಾರು ಮಕ್ಕಳು ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಎರಡನೇ ಅಲೆಯ ಬಳಿಕ ಮಕ್ಕಳಲ್ಲಿ ಮೆಸ್ಸಿ-ಸಿ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪೋಷಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಜ್ವರ, ಹೊಟ್ಟೆ, ನೋವು ಸುಸ್ತಿನಂತಹ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸುವ ಅಗತ್ಯ ಇದೆ.

Facebook Comments