ಚೀಲಿ ಟೆಕ್ವಾಂಡೋ ಆಟಗಾರ್ತಿಗೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ,ಜು.21-ಜಪಾನ್‍ನಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್‍ನಲ್ಲಿ ಭಾಗವಹಿಸಬೇಕಿದ್ದ ಚೀಲಿ ಟೆಕ್ವಾಂಡೋ ಆಟಗಾರ್ತಿ ಫರ್ನಾಂಡ ಅಗಿರೇ ಅವರಿಗೆ ಕೊರೊನಾ ಸೋಂಕು ತಗುಲಿದೆ. ಜಪಾನ್‍ಗೆ ತೆರಳಬೇಕಿದ್ದ ಫರ್ನಾಂಡ ಅವರನ್ನು ತಪಾಸಣೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿರುವುದರಿಂದ ಅವರು ಈ ಬಾರಿಯ ಒಲಂಪಿಕ್ಸ್‍ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಚೀಲಿ ಸರ್ಕಾರ ತಿಳಿಸಿದೆ.

ಫರ್ನಾಂಡ ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಅವರು ಆರೋಗ್ಯವಾಗಿದ್ದರೆ, ಅವರನ್ನು ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಒಲಂಪಿಕ್ಸ್‍ನಲ್ಲಿ ಅವರು ಭಾಗಿಯಾಗುತ್ತಿಲ್ಲ ಎಂದು ಚೀಲಿ ಒಲಂಪಿಕ್ಸ್ ಸಂಸ್ಥೆ ತಿಳಿಸಿದೆ.

Facebook Comments