ಪಾಕ್‍ಗೆ ಕೈಗೆ ಜೆಎಫ್-17 ಫೈಟರ್ ಜೆಟ್ ಕೊಟ್ಟ ಚೀನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್/ಇಸ್ಲಾಮಾಬಾದ್, ಮೇ 22- ಪಾಕಿಸ್ತಾನ ವಾಯು ಪಡೆ(ಪಿಎಎಫ್)ಗೆ ಚೀನಾ ಬಹು ಪಾತ್ರ ನಿರ್ವಹಿಸುವ ಜೆಎಫ್-17 ಯುದ್ದ ವಿಮಾನದ ಮೊದಲ ಫೈಟರ್‍ಜೆಟ್‍ನನ್ನು ಪೂರೈಸಿದೆ. ಇದರಿಂದ ಪಾಕ್ ಸೇನಾ ಸಾಮಥ್ರ್ಯ ವೃದ್ಧಿಯಾಗಿದೆ.

ಈ ಶ್ರೇಣಿಯ ಸಮರ ವಿಮಾನಗಳ ಅಭಿವೃದ್ಧಿ ಮತ್ತು ತಯಾರಿಕೆಗಾಗಿ ದಶಕದ ಹಿಂದೆಯೇ ಈ ಎರಡು ದೇಶಗಳ ನಡುವೆ ಯೋಜನೆಗಾಗಿ ಒಪ್ಪಂದವಾಗಿತ್ತು. ಅದರ ಭಾಗವಾಗಿ ಇಸ್ಲಾಮಾಬಾದ್‍ಗೆ ಬೀಜಿಂಗ್ ಪ್ರಥಮ ಜೆಎಫ್-17 ಫೈಟರ್‍ಜೆಟ್ ನೀಡಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಮತ್ತು ಪಾಕಿಸ್ತಾನ ಹತ್ತು ವರ್ಷದಿಂದಲೂ ಏಕ ಎಂಜಿನ್‍ನ ಎಫ್-17 ಜೆಟ್ ಮಾನಗಳ ಜಂಟಿ ಅಭಿವೃದ್ದಿ ಮತ್ತು ತಯಾರಿಕೆಯಲ್ಲಿ ತೊಡಗಿದ್ದವು. ೨೦೦೭ರಲ್ಲಿ ಚೀನಾ ಇದೇ ಶ್ರೇಣಿಯ ಹಳೆ ಮಾದರಿ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು.

ಈಗ ಮೇಲ್ದರ್ಜೆಯೊಂದಿಗೆ ಜೆಎಫ್-17 ಯುದ್ಧ ವಿಮಾನದ ಮೊದಲ ಜೆಟ್‍ನನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆ ಪಿಎಎಫ್‍ಗೆ ಸೇರ್ಪಡೆಯಾಗಲಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin