ಚೀನಾಗೆ ಟಾಂಗ್ ನೀಡಿದ ಆಸ್ಟ್ರೇಲಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾನ್‍ಬೇರಾ,ಸೆ.17-ಅಮೆರಿಕಾ ಮತ್ತು ಬ್ರಿಟನ್‍ನೊಂದಿಗೆ ಪರಮಾಣು ಜಲಂತರ್ಗಾಮಿ ನೌಕೆ ನಿರ್ಮಾಣದ ಒಡಂಬಡಿಕೆ ಮಾಡಿಕೊಂಡಿರುವ ಕ್ರಮವನ್ನು ಖಂಡಿಸಿರುವ ಚೀನಾ ದೇಶಕ್ಕೆ ಆಸ್ಟ್ರೇಲಿಯಾ ತಿರುಗೇಟು ನೀಡಿದೆ. ಅಮೆರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಇತ್ತಿಚೆಗೆ ತಿಪಕ್ಷಿಯ ಎಯುಕೆಯುಎಸ್ ಮೈತ್ರಿಕೂಟ ರಚಿಸಿಕೊಂಡಿರುವುದನ್ನು ಚೀನಾ ಖಂಡಿಸಿತ್ತು.

ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಉದ್ದೇಶದಿಂದ ನಾವು ಮೈತ್ರಿಕೂಟ ರಚಿಸಿಕೊಂಡಿದ್ದೇವೆ. ಅದರ ಬಗ್ಗೆ ಚೀನಾಗೆ ಚಿಂತೆ ಏತಕ್ಕೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಪ್ರಶ್ನಿಸಿದ್ದಾರೆ. ಅಮೆರಿಕದೊಂದಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಸಂಬಂಧ ವೃದ್ಧಿಗೆ ನಾವು ಈಗಾಗಲೆ ಕೈ ಜೊಡಿಸಿದ್ದೇವೆ. ಹೀಗಾಗಿ ನಾವು ಆ ದೇಶದೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದೇವೆ. ಇದರಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಮಾರಿಸನ್ ಆಸ್ಟ್ರೇಲಿಯಾ ರೆಡಿಯೋ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಅಮೆರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾದೊಂದಿಗೆ ನಾವು ರಚಿಸಿಕೊಂಡಿರುವ ಮೈತ್ರಿಕೂಟದಿಂದ ಅಂತಾರಾಷ್ಟ್ರೀಯ ಸಮುದಾಯ ಆತಂಕಪಡುವ ಅವಶ್ಯಕತೆ ಇಲ್ಲ. ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ ನೆಲೆಸಬೇಕು ಎಂಬ ಉದ್ದೇಶದಿಂದ ಮಾತ್ರ ನಾವು ಇಂತಹ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸ್ಪಷ್ಟನೆ ನೀಡಿದ್ದಾರೆ.

Facebook Comments