ಭಾರತಕ್ಕೆ 6.50 ಲಕ್ಷ ಮೆಡಿಕಲ್ ಕಿಟ್ ರವಾನಿಸಿದ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಏ.16- ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗಲು ಚೀನಾ 6,50,000 ಮೆಡಿಕಲ್ ಕಿಟ್‍ಗಳನ್ನು ರವಾನಿಸಿದೆ. ರಕಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಉಲ್ಬಣಗೊಂಡ ನಂತರಚೀನಾ ಭಾರತಕ್ಕೆ ನೀಡುತ್ತಿರುವ ಮೊದಲ ಸಹಾಯಇದಾಗಿದೆ.

ರಾಜಧಾನಿ ಬೀಜಿಂಗ್‍ನಲ್ಲಿರುವ ಭಾರತೀಯರಾಯಭಾರಿ ವಿಕ್ರಮ್ ಮಿಸ್ರಿ ಈ ವಿಷಯ ತಿಳಿಸಿದ್ದಾರೆ.ಚೀನಾದಿಂದ ಎರಡು ದಶಲಕ್ಷಕ್ಕೂ ಹೆಚ್ಚು ಮೆಡಿಕಲ್ ಕಿಟ್‍ಗಳನ್ನು ತಯಾರಿಸಲಾಗಿದ್ದು, ಮುಂದಿನ 15 ಚಿನಗಳ ಒಳಗೆ ಭಾರತಕ್ಕೆ ಅವುಗಳನ್ನು ರವಾನಿಸಲಾಗುತ್ತಿದೆಎಂದು ಮಿಸ್ರಿ ವಾರ್ತಾ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ರ್ಯಾಪಿಡ್ ಆಂಟಿಬಾಡಿಟೆಸ್ಸ್ ಮತ್ತು ಆರ್‍ಎನ್‍ಎಎಕ್ಸ್‍ಟ್ರಾಕ್ಷನ್ ಸಾಧನಗಳೂ ಸೇರಿದಂತೆ 6.50 ಲಕ್ಷ ಮೆಡಿಕಲ್ ಕಿಟ್‍ಗಳು ಭಾರತಕ್ಕೆ ರವಾನೆಯಾಗಿದೆ ಎಂದು ಅವರು ಟ್ವೀಟ್‍ನಲ್ಲಿಯೂ ಸಹ ಮಾಹಿತಿ ನೀಡಿದ್ದಾರೆ.

ಕಿಲ್ಲರ್‍ಕೊರೊನಾ ವಿರುದ್ದ ಎರಡು ತಿಂಗಳುಗಳಿಗೂ ಹೆಚ್ಚು ಕಾಲ ಚೀನಾ ಲಾಕ್‍ಡೌನ್‍ಆಗಿತ್ತು. ಈಗ ನಿರ್ಬಂಧವನ್ನು ತೆರವುಗೊಳಿಸಿರುವುದರಿಂದ ಕಾರ್ಖಾನೆಗಳು ಪುನರಾರಂಭವಾಗಿದ್ದು, ವಿಶೇಷವಾಗಿ ವೆಂಟಿಲೇಟರ್‍ಗಳು, ವೈಯಕ್ತಿ ಸುರಕ್ಷಿತ ಸಾಧನಗಳೂ ಸೇರಿದಂತೆ ಪ್ರಮುಖ ವೈದ್ಯಕೀಯ ವಸ್ತುಗಳ ತಯಾರಿಕೆಯಲ್ಲಿ ನಿರತವಾಗಿವೆ.

Facebook Comments

Sri Raghav

Admin