ಗಡಿಯಲ್ಲಿ ಭಾರತದ ಯುದ್ಧ ಸಿದ್ಧತೆ ಕಂಡು ಚೀನಾ ತಬ್ಬಿಬ್ಬು..!

ಈ ಸುದ್ದಿಯನ್ನು ಶೇರ್ ಮಾಡಿ

ಲೇಹ (ಲಡಾಕ್), ಸೆ.28- ಪೂರ್ವ ಲಡಾಕ್‍ನಲ್ಲಿ ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದಿಂದಾಗಿ ತಲೆದೋರಿರುವ ಯುದ್ಧದ ದಟ್ಟ ಕಾರ್ಮೋಡ ಸಧ್ಯಕ್ಕೆ ಚದುರಿಹೋಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಬದಲಿಗೆ ಗಡಿ ಭಾಗದಲ್ಲಿ ಸಮರ ಸದೃಶ ವಾತಾವರಣ ನಿರ್ಮಾಣವಾಗಿದೆ.

ಚೀನಾಗೆ ತಿರುಗೇಟು ನೀಡಲು ನಿನ್ನೆಯಿಂದ ಭಾರತದ ಸಮರ ಟ್ಯಾಂಕರ್‍ಗಳು ಮತ್ತು ಅಗಾಧ ಯುದ್ಧಾಸ್ತ್ರಗಳು ಪೂರ್ವ ಲಡಾಕನ್‍ನ ವಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಜಮಾವಣೆಗೊಂಡಿವೆ.

ಭಾರತ ಸೇನೆಯ ಅಗಾಧ ಯುದ್ಧ ಸಿದ್ಧತೆಯಿಂದ ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಯೋಧರು ತಬ್ಬಿಬ್ಬಾಗಿದ್ದಾರೆ. ಶತೃಗಳ ಭೂ ಸೇನೆ ಸಾಮಥ್ರ್ಯವನ್ನು ನುಚ್ಚುನೂರು ಮಾಡಬಲ್ಲ ಟಿ-90, ಟಿ-72 ಸಮರ ಟ್ಯಾಂಕ್‍ಗಳು ಮತ್ತು ಭಾರತ ಭೂ ಸೇನೆ ಪಡೆಯ ಭಾರೀ ಶಸ್ತ್ರಾಸ್ತ್ರ ವಾಹನಗಳು ಗಡಿಯಲ್ಲಿ ಸಜ್ಜಾಗಿದ್ದು, ಭಾರತದ ಈ ಹಠಾತ್ ಮುನ್ನೆಚ್ಚರಿಕೆ ಕ್ರಮದಿಂದ ಚೀನಿ ಸೇನಾ ಪಡೆ ಕಕ್ಕಾಬಿಕ್ಕಿಯಾಗಿದೆ.

ಪೂರ್ವ ಲಡಾಕ್‍ನ ಚುನಾರ್ ಮತ್ತು ಧಮ್‍ಚೋರ್ ಪ್ರದೇಶ ಹಾಗೂ ಪ್ಯಾನ್‍ಗಾಂಗ್ ಸರೋವರದ ಬಳಿ ಭಾರತದ ಯುದ್ಧಾಸ್ತ್ರಗಳು ಯಾವುದೇ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವುದರಿಂದ ಚೀನಾ ಮಿಲಿಟರಿ ದೃತಿಗೆಟ್ಟಂತೆ ಕಂಡು ಬರುತ್ತಿದೆ.

ನಾವು ಮುನ್ನೆಚ್ಚರಿಕೆ ಕ್ರಮವಾಗಿ ಸಮರ ಟ್ಯಾಂಕ್‍ಗಳು ಮತ್ತು ನಮ್ಮ ಸೇನಾ ಬಲವನ್ನು ಅಲ್ಲಿ ನಿಯೋಜಿಸಿದ್ದೇವೆ. ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗಡಿ ರಕ್ಷಣೆಯ ಉಸ್ತುವಾರಿ ವಹಿಸಿರುವ ಉನ್ನತ ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin