ಕರೋನ ಹೋರಾಟದಲ್ಲಿ ಗೆದ್ದಿದ್ದೇವೆ ಎಂದು ಘೋಷಿಸಿಕೊಂಡ ಚೀನಾದಿಂದ ವಿಶ್ವಕ್ಕೆ ಧೋಖಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್/ವಾಷಿಂಗ್ಟನ್, ಮಾ.20- ಇಡೀ ವಿಶ್ವವನ್ನೇ ಕಂಗಾಲು ಮಾಡಿರುವ ಮಾರಕ ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿರುವುದಾಗಿ ಚೀನಾ ಅಧಿಕೃತ ಘೋಷಣೆ ಹೊರಡಿಸಿದೆ. ಆದರೆ ಈ ಪ್ರಕಟಣೆ ಹಿಂದೆ ಚೀನಾದ ಆರ್ಥಿಕ ಕುತಂತ್ರವೂ ಇದೆ ಎಂದು ಯುರೋಪ್ ಮತ್ತು ಅಮರಿಕ ಆರೋಪಿಸಿದೆ.  ಚೀನಾದ ಯಾವುದೇ ಭಾಗದಲ್ಲಿ ಎರಡನೇ ದಿನವಾದ ಇಂದೂ ಕೂಡ ಯಾವುದೇ ಹೊಸ ಸೊಂಕು ಪ್ರಕರಣಗಳು ವರದಿಯಾಗದಿರುವ ಸಂದರ್ಭದಲ್ಲೇ ಕೋವಿಡ್-19 ವಿರುದ್ಧದ ಸಮರದಲ್ಲಿ ಜಯ ಗಳಿಸಿರುವುದಾಗಿ ಘೋಷಿಸಿದೆ.

ಚೀನಾದ ಈ ಕ್ರಮದ ಹಿಂದೆ ಸ್ವಾರ್ಥ ಮತ್ತು ಸ್ವಹಿತಾಸಕ್ತಿಯ ಹುನ್ನಾರವೂ ಇದೆ ಎಂಬ ಮಾತುಗಳೂ ಕೇಳಿಬಂದಿವೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ ಚೀನಾದ ಹೆಬೀ ಪ್ರಾಂತ್ಯದ ವುಹಾನ್ ನಗರಿಯಲ್ಲಿ ಮೊಟ್ಟ ಮೊದಲ ಕಾಣಿಸಿಕೊಂಡ ಕೊರೊನಾ ವೈರಾಣು ಸೋಂಕು ದೇಶದ ಇತರ ಪ್ರಾಂತ್ಯಗಳಿಗೂ ವಿಸ್ತರಿಸಿತು. ನಂತರ ಏಷ್ಯಾ ಖಂಡಗಳಿಗೆ ಹಬ್ಬಿ, ಈಗ ವಿಶ್ವವ್ಯಾಪಿ ಆವರಿಸಿಕೊಂಡಿದೆ.

ಚೀನಾದಲ್ಲಿ ಈವರೆಗೆ ಈ ಮಾರಕ ಸೋಂಕಿಗೆ 3,250ಕ್ಕೂ ಹೆಚ್ಚು ಮಂದಿ ಬಲಿಯಾಗಿ, 80,000ಕ್ಕೂ ಅಧಿಕ ಜನರು ರೋಗಪೀಡಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಕ್ಷೀಣಿಸಿದೆ. ಚೀನಾದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಯನ್ನು ಅನುಸರಿಸಿ ಔಷಧಿಗಳನ್ನು ಅನ್ವೇಷಣೆ ಮಾಡಿದ್ದು, ಸಹಸ್ರಾರು ಮಂದಿ ಗುಣಮುಖರಾಗಿದ್ದಾರೆ ಎಂದು ಚೀನಾದ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಹೇಳಿದ್ದಾರೆ.

ಆರ್ಥಿಕ ಕುಟೀಲ ನೀತಿ ? : ಕೊರೊನಾ ವೈರಸ್ ಹೆಸರಿನಲ್ಲಿ ಚೀನಾ ಜಗತ್ತಿಗೇ ಮೋಸ ಮಾಡಿದೆಯೇ ಮತ್ತು ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಅನುಸರಿಸಿದ ವಾಮ ಮಾರ್ಗದಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗಳು ಇದೇ ಸಂದರ್ಭದಲ್ಲಿ ಉದ್ಭವಿಸಿವೆ. ಈ ಪ್ರಶ್ನೆಗಳನ್ನು ನಿರ್ದಿಷ್ಟವಾಗಿ ಅಮೆರಿಕನ್ನರು ಮತ್ತು ಯುರೋಪಿಯನ್ನರು ಕೇಳುತ್ತಿದ್ದಾರೆ.

ಚೀನಾ ಸರ್ಕಾರಕ್ಕೆ ಅತ್ಯಂತ ಕನಿಷ್ಠ ಬೆಲೆಗೆ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಅಧಿಕ ಮೌಲ್ಯವರ್ಧಿತ ತಂತ್ರಜ್ಞಾನ ಕಂಪನಿಗಳಲ್ಲಿ ತನ್ನ ಷೇರುಗಳನ್ನು ಮಾರಾಟ ಮಾಡಿದ್ದವು. ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಚೀನಾ ಕೊರೊನಾ ಗುಮ್ಮನನ್ನು ಜಗತ್ತಿಗೆ ಬಿಟ್ಟು ಹೆದರಿಸಿ ಆರ್ಥಿಕ ಸ್ಥಿತಿಯನ್ನು ಅಲ್ಲೋಲಕಲ್ಲೋಲ ಮಾಡಿದೆ ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ.

ಚೀನಾದ ಆರ್ಥಿಕತೆಗೆ ಬೆಂಬಲ ನೀಡಲು ಯುರೋಪ್ ಹೂಡಿಕೆದಾರರಿಂದ ಮುಕ್ತಿ ಹೊಂದಲು ರಾಜಕೀಯ ತಂತ್ರಗಾರಿಕೆಯಲ್ಲಿ ವಿಫಲವಾದ ಚೀನಾ ಸರ್ಕಾರ, ಈ ಹೊಸ ತಂತ್ರದ (ಕೊರೊನಾ ಹೆಮ್ಮಾರಿ) ಮೂಲಕ ಅಮೆರಿಕ ಮತ್ತು ಯೂರೋಪ್ ಸಂಸ್ಥೆಗಳಿಗೆ ಬೈಪಾಸ್ ಮಾಡುವಲ್ಲಿ ಸಫಲವಾಗಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ತಾರಕಕ್ಕೇರಿದ ಸಂದರ್ಭದಲ್ಲೇ ಕೊರೊನಾ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿದ್ದು, ಕೂಡ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಚೀನಾದ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ದಿವಾಳಿತನವನ್ನು ಪ್ರಬಲ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಸುಲಭವಾಗಿ ಕ್ಷಮಿಸಲು ಬೀಜಿಂಗ್ ಕೊರೊನಾ ಅಸ್ತ್ರ ಬಳಸಿದೆಯೇ ಎಂಬ ಪ್ರಶ್ನೆ ಈ ಹಂತದಲ್ಲಿ ಸಹಜವಾಗಿಯೇ ಉದ್ಭವಿಸುತ್ತದೆ.  ತನ್ನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಾಗಿ ತನ್ನ ಇಡೀ ರಾಷ್ಟ್ರವನ್ನೇ ಬಲಿ ಕೊಡುವ ಬದಲು ದೇಶದ ಹಲವರನ್ನು ಇದಕ್ಕೆ ದುರುಪಯೋಗ ಮಾಡಿಕೊಂಡು, ಅದರ ಪ್ರಯೋಜವನ್ನು ಪಡೆಯಲು ಇದು ಚೀನಾ ನಡೆಸಿರುವ ಹುನ್ನಾರ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಒಂದು ಊರು ಉಳಿಯಬೇಕಾದರೆ ಒಂದು ಮನೆಯನ್ನು ಧ್ವಂಸಗೊಳಿಸಿದರೂ ಅದು ತಪ್ಪಲ್ಲ ಎಂಬ ಗಾದೆ ಮಾತನ್ನು ಚೀನಾ ಅನುಸರಿಸಿದೆ ಎಂದು ಸಹ ಆರೋಪಿಸಲಾಗುತ್ತಿದೆ. ಮಹತ್ವದ ಸಂಗತಿ ಎಂದರೆ ಕೊರೊನಾ ವೈರಾಣು ದಾಳಿಯಿಂದ ಚೀನಾದಲ್ಲಿ ಸಾವು-ನೋವು ಮತ್ತು ನಷ್ಟದ ನಡುವೆಯೂ ಕೇವಲ ಎರಡೇ ದಿನಗಳಲ್ಲಿ 20 ಶತಕೋಟಿ ಡಾಲರ್‍ಅನ್ನು ಗಳಿಸಿ ಉಳಿಸಿಕೊಂಡಿದೆ.

ಒಂದೆಡೆ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯಾದ ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಐರೋಪ್ಯ ಸಮುದಾಯ ಮತ್ತು ಅಮೆರಿಕ ಅಷ್ಟೇ ಏಕೆ ವಿಶ್ವದ ಕಣ್ಣಿಗೆ ಮಣ್ಣೆರೆಚಿದ್ದಾರೆ ಎಂದು ಸಹ ಆರೋಪಿಸಲಾಗುತ್ತಿದೆ. ಅತ್ಯಂತ ಕುಟೀಲ ನೀತಿಯಿಂದ ಆರ್ಥಿಕ ದುರಂಗದಾಟದಲ್ಲಿ ಚೀನಾ ಗೆದ್ದಿದೆ.  ಕೊರೊನಾ ದಾಳಿಗೂ ಮುನ್ನ ತಂತ್ರಜ್ಞಾನ ಮತ್ತು ರಾಸಾಯನಿಕ ಉತ್ಪಾದನಾ ಘಟಕಗಳಲ್ಲಿನ ಬಂಡವಾಳ ಹೂಡಿಕೆ ಯೋಜನೆಗಳಲ್ಲಿ ಷೇರುಗಳು ಯುರೋಪ್ ಮತ್ತು ಅಮೆರಿಕ ಹೂಡಿಕೆದಾರರ ಒಡೆತನದಲ್ಲಿದ್ದವು.

ಇದರರ್ಥ ಏನೆಂದರೆ ಸಣ್ಣ ಮತ್ತು ಭಾರೀ ತಂತ್ರಜ್ಞಾನಗಳು ಮತ್ತು ರಾಸಾಯನಿಕ ಕೈಗಾರಿಕೆಗಳ ಲಾಭಗಳಲ್ಲಿ ಅರ್ಧದಷ್ಟು ವಿದೇಶಿ ಹೂಡಿಕೆದಾರರ ಪಾಲಾಗುತ್ತಿತ್ತು. ಚೀನಾದ ಬೊಕ್ಕಸಕ್ಕೆ ಲಭಿಸುತ್ತಿದ್ದುದು ಅಲ್ಪ ಮೊತ್ತ ಮಾತ್ರ. ಇದನ್ನು ಸಹಿಸದ ಚೀನಾ ಕೊರೊನಾ ಗುಮ್ಮನನ್ನು ಮುಂದಿಟ್ಟುಕೊಂಡು ವಿದೇಶಿ ಹೂಡಿಕೆದಾರರಿಗೆ ಸರಿಯಾದ ಆರ್ಥಿಕ ಪೆಟ್ಟು ನೀಡಿದೆ. ಅಲ್ಲದೇ ಡಾಲರ್ ಎದುರು ಯೆನ್ ಅಪಮೌಲ್ಯವಾಗುವುದನ್ನು ತಪ್ಪಿಸಲು ಕುತಂತ್ರ ರೂಪಿಸುವಲ್ಲಿ ಸಫಲವಾಗಿದೆ ಎಂದು ಆರ್ಥಿಕ ಪಂಡಿತರು ವಿಶ್ಲೇಷಿಸಿದ್ಧಾರೆ.

Facebook Comments