ಪದಕ ಪಟ್ಟಿಯಲ್ಲಿ ಚೀನಾ ನಂಬರ್ 1

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ, ಜು.26- ಒಲಿಂಪಿಕ್ಸ್‍ನ ಪದಕ ಪಟ್ಟಿಯಲ್ಲಿ ಚೀನಾ ದೇಶವು ನಂಬರ್ 1 ಸ್ಥಾನದಲ್ಲೇ ಮುಂದುವರೆದಿದ್ದು, ನಾಲ್ಕನೇ ದಿನವಾದ ಇಂದು ಕೂಡ ಪದಕದ ಬೇಟೆಯನ್ನು ಮುಂದುವರೆಸಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಚೀನಾವು 6 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ಗೆದ್ದು ಸಂಭ್ರಮಿಸಿದೆ.

ದ್ವಿತೀಯ ಸ್ಥಾನದಲ್ಲಿ ಅಮೆರಿಕಾ 6 ಚಿನ್ನ, 3 ಬೆಳ್ಳಿ, 4 ಕಂಚು ಒಟ್ಟು 13 ಪದಕಗಳನ್ನು ಜಯಿಸಿದ್ದರೆ, 6 ಚಿನ್ನ, 1 ಬೆಳ್ಳಿ, 1 ಕಂಚಿನ ಮೂಲಕ 8 ಪದಕಗಳನ್ನು ಗೆಲ್ಲುವ ಮೂಲಕ ಜಪಾನ್ 3ನೆ ಸ್ಥಾನದಲ್ಲಿದೆ. ಭಾರತವು 1 ಬೆಳ್ಳೆ ಪದಕ ಗೆಲ್ಲುವ ಮೂಲಕ 25 ಸ್ಥಾನದಲ್ಲಿದೆ.

Facebook Comments