‘ರಣರಂಗ’ಕ್ಕೆ ಮೋದಿ ಎಂಟ್ರಿ, ತಬ್ಬಿಬ್ಬಾದ ಚೀನಾದಿಂದ ಶಾಂತಿ ಮಂತ್ರ ಜಪ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಜು.3- ಸಮರ ಸದೃಶ ವಾತಾವರಣ ನಿರ್ಮಾಣವಾಗಿರುವ ಲಡಾಕ್‍ನ ಲೇಹ್ ಗಡಿಪ್ರದೇಶದ ಭಾರತೀಯ ಮುಂಚೂಣಿ ಸೇನಾ ನೆಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಹಠಾತ್ ಭೇಟಿ ನೀಡಿರುವುದರಿಂದ ತಬ್ಬಿಬ್ಬಾಗಿರುವ ಚೀನಾ ಈಗ ಶಾಂತಿ ಮಾತುಕತೆ ಜಪ ಮಾಡುತ್ತಿದೆ.

ಪ್ರಧಾನಿ ಲೇಹ್ ಭೇಟಿ ನಂತರ ಪ್ರಥಮ ಬಾರಿಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ, ಯಾವುದೇ ಸಮಸ್ಯೆ ಇರಲಿ ಮಾತುಕತೆಯೊಂದೇ ಅದಕ್ಕೆ ಪರಿಹಾರ ಎಂದು ತಿಳಿಸಿದೆ.  ಯಾವುದೇ ಸುಳಿವು ಬಿಟ್ಟುಕೊಡದೆ ಗಡಿ ಪ್ರದೇಶಕ್ಕೆ ಪ್ರಧಾನಿ ಹಠಾತ್ ಭೇಟಿಯಿಂದ ಚೀನಾ ಕಂಗಾಲಾಗಿದ್ದು, ಭಾರತದ ಯುದ್ಧ ಸನ್ನದ್ಧತೆ ಬಗ್ಗೆ ಬೀಜಿಂಗ್‍ಗೆ ನಡುಕ ಉಂಟಾಗಿದೆ.

ಯಾವುದೇ ಸಮಸ್ಯೆ ಮತ್ತು ವಿವಾದಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದು. ಇದಕ್ಕೆ ಪರಸ್ಪರ ಸಮಾಲೋಚನೆಯೇ ಪರಿಹಾರ ಎಂದು ಹೇಳಿಕೆ ನೀಡಿರುವ ಚೀನಾ ಮೋದಿ ರಂಗಪ್ರವೇಶದಿಂದ ಹೆದರಿ ಈಗ ಶಾಂತಿ ಜಪ ಮಾಡುತ್ತಿದೆ.

Facebook Comments