ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಗೆಲುವು ಖಚಿತ : ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಬೀಜಿಂಗ್, ಮಾ.26-ಮಾರಕಕೊರೊನಾ (ಕೋವಿಡ್-19) ವಿರುದ್ಧ ಹೋರಾಡಲು ಭಾರತಕ್ಕೆಅಗಾಧ ಸಾಮಥ್ರ್ಯವಿದ್ದು, ಈ ಸಮರದಲ್ಲಿ ಗೆಲುವು ಖಚಿತಎಂದುಚೀನಾ ಹೇಳಿದೆ. ನವದೆಹಲಿಯಲ್ಲಿರುವಚೀನಾರಾಯಭಾರಿಕಚೇರಿ ವಕ್ತಾರರ ಈ ಕುರಿತು ಹೇಳಿಕೆ ನೀಡಿದ್ದ, ಕೋವಿಡ್-19ರ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆಅಗತ್ಯವಾದಎಲ್ಲ ನೆರವು ನೀಡಲು ಸಿದ್ದ ಎಂದು ತಿಳಿಸಿದ್ದಾರೆ.

ಭಾರತವುಕೊರೊನಾ ಹೆಮ್ಮಾರಿ ವಿರುದ್ಧ ಈಗ ಸಮರ ನಡೆಸುತ್ತಿದೆ. ಅವಧಿಗೆ ಮುನ್ನವೇ ಈ ಯುದ್ದದಲ್ಲಿಗೆಲ್ಲುತ್ತದೆಎಂದುರಾಯಭಾರಿಕಚೇರಿ ವಕ್ತಾರರಾದಜಿ.ರೊಂಗ್ ತಿಳಿಸಿದ್ದಾರೆ.  .ಮೊನ್ನೆಯಷ್ಟೇ ವಿಶ್ವಆರೋಗ್ಯ ಸಂಸ್ಥೆ-ಡಬ್ಲ್ಯುಎಚ್‍ಒಕೂಡಇದೇ ಹೇಳಿಕೆ ನೀಡಿ ಭಾರತದ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು.

ಭಾರತವು ಸಿಡುಬು ಮತ್ತು ಪೋಲಿಯೋದಂಥಎರಡು ರೋಗಗಳನ್ನು ನಿರ್ಮೂಲನೆ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ. ದೇಶವು ಹಿಂದಿನ ಅನುಭವನಗಳನ್ನು ಬಳಸಿಕೊಂಡು ಕೋವಿಡ್ ಹೆಮ್ಮಾರಿಯನ್ನು ನಿಗ್ರಹಿಸುವ ಅಗಾಧ ಸಾಮಥ್ರ್ಯ ಹೊಂದಿದೆ ಮತ್ತುಇದರ ವಿರುದ್ಧದ ಹೋರಾಟದಲ್ಲಿಖಂಡಿತಾಜಯ ಸಾಧಿಸಲಿದೆ.ಎಂದು ವಿಶ್ವಆರೋಗ್ಯ ಸಂಸ್ಥೆಯಕಾರ್ಯಕಾರಿ ನಿರ್ವಾಹಕ ಮೈಕೆಲ್‍ಜೆ. ರೆಯಾನ್ ಹೇಳಿದ್ದರು.

ಯಾವುದೇ ಹೊಸ ಸೋಂಕು ರೋಗಗಳನ್ನು ನಿಗ್ರಹಿಸುವುದು ಸುಲಭದಉತ್ತರವಲ್ಲ. ಆದರೆ ಭಾರತವು ಈ ಹಿಂದೆಗಂಭೀರ ಸ್ವರೂಪದ ರೋಗಗಳ ನಿರ್ಮೂಲನೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು. ಆ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎಂಧುಅವರು ತಿಳಿಸಿದ್ದರು.

Facebook Comments

Sri Raghav

Admin