ಮುರಿದುಬಿದ್ದ ಚೀನಾ-ಅಮೆರಿಕ ಬಾಂಧವ್ಯ
ಈ ಸುದ್ದಿಯನ್ನು ಶೇರ್ ಮಾಡಿ
ವಾಷಿಂಗ್ಟನ್, ಜು.11- ಕೊರೊನಾ ಸೃಷ್ಟಿಕರ್ತ ಚೀನಾ ದೇಶದೊಂದಿಗೆ ಎಲ್ಲ ರೀತಿಯ ಬಾಂಧವ್ಯವನ್ನು ಕಡಿದುಕೊಳ್ಳಲಾಗುವುದು ಎಂದು ಅಮೆರಿಕ ಘೋಷಿಸಿದೆ.
ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಚೀನಾದೊಂದಿಗಿನ ನಮ್ಮ ಬಾಂಧವ್ಯ ಕಡಿದುಹೋಗಿದ್ದು, ಆ ದೇಶದೊಂದಿಗೆ ಯಾವುದೇ ರೀತಿಯ ವಾಣಿಜ್ಯ ವಹಿವಾಟು ಕುರಿತ ಸಭೆ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಕಾಣಿಸಿಕೊಳ್ಳುವುದಕ್ಕೂ ಮುನ್ನ ಅಮೆರಿಕ ಮತ್ತು ಚೀನಾ ನಡುವೆ ಮಹತ್ವದ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದ್ದವು.
ಇದೀಗ ಎರಡನೆ ಹಂತದ ಮಾತುಕತೆ ನಡೆಯುವ ಕಾಲ ಸನ್ನಿಹಿತವಾದ ಬೆನ್ನಲ್ಲೇ ಟ್ರಂಪ್ ಅವರ ಹೇಳಿಕೆ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯದ ಅಂತ್ಯ ಎಂದೇ ಭಾವಿಸಲಾಗುತ್ತಿದೆ.
Facebook Comments