ಚೀನಾ ಪ್ರವೃತ್ತಿ ಶಾಂತಿಗೆ ಮಾರಕ : ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಡಿ.2- ಅತ್ಯಾಧುನಿಕ ಆಯುಧಗಳನ್ನು ಹೊಂದುವ ಚೀನಾದ ಗೀಳು ಈ ಪ್ರದೇಶದಲ್ಲಿ ಉದ್ವೇಗ ಹೆಚ್ಚಿಸುತ್ತದೆ ಎಂದು ಅಮೆರಿಕದ ರಕ್ಷಣಾ ಮುಖ್ಯಸ್ಥರು ಹೇಳಿದ್ದಾರೆ. ಅಮೆರಿಕದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರು ದಕ್ಷಿಣ ಕೊರಿಯಾದ ತಮ್ಮ ಸಹವರ್ತಿಯೊಂದಿಗೆ ಗುರುವಾರ ನಡೆಸಿದ ವಾರ್ಷಿಕ ರಕ್ಷಣಾ ಮಾತುಕತೆ ಬಳಿಕ ಈ ಟಿಕೆ ಮಾಡಿದರು.

ಅಮೆರಿಕವು ಚೀನಾದ ಮಿಲಿಟರಿ ಶಕ್ತಿಯ ಬಗ್ಗೆ ಕಳವಳ ಹೊಂದಿದೆ. ಮತ್ತು ಬೀಜಿಂಗ್ ನಮ್ಮ ಬೆಳೆಯುತ್ತಿರುವ ಸವಾಲು ಎಂದು ಆಸ್ಟಿನ್ ಪ್ರತಿಪಾದಿಸಿದ್ದಾರೆ.

ನಮಗೆ ಮತ್ತು ನಮ್ಮ ಮಿತ್ರ ರಾಷ್ಟ್ರಗಳಿಗೆ ಚೀನಾದಿಂದ ವ್ಯಕ್ತವಾಗಿರುವ ಬೆದರಿಕೆಯ ವಿರುದ್ಧ ರಕ್ಷಿಸಿಕೊಳ್ಳಲು ಅಮೆರಿಕವು ತನ್ನ ಸಾಮಥ್ರ್ಯಗಳ ನಿರ್ವಹಣೆ ಮಾಡುತ್ತದೆ ಎಂದು ಆಸ್ಟಿನ್ ವಿವರಿಸಿದ್ದಾರೆ.

Facebook Comments