ಕೊರೋನಾದಿಂದ ಬಚಾವಾದ ಚೀನಾ, ವಿಶ್ವದಾದ್ಯಂತ ನಿಲ್ಲದ ಮರಣಮೃದಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ಬೀಜಿಂಗ್, ಏ.27- ಇಡೀ ವಿಶ್ವಕ್ಕೆ ಕಿಲ್ಲರ್ ಕೊರೊನಾವನ್ನು ಕೊಡುಗೆಯಾಗಿ ನೀಡಿ ಎರಡು ಲಕ್ಷಕ್ಕೂ ಅಧಿಕ ಸಾವಿಗೆ ಕಾರಣವಾದ ಚೀನಾ ಈಗ ಕೋವಿಡ್-19 ವೈರಾಸ್‍ನಿಂದ ಬಚಾವ್ ಆಗಿದೆ. ಆದರೆ ಡೆಡ್ಲಿ ಕೊರೊನಾ ಇಡೀ ಜಗತ್ತಿಗೆ ಕಾಡುತ್ತಿರುವ ಮಹಾಮಾರಿಯಾಗಿ ಪರಿಣಮಿಸಿದೆ.

ಕೊರೊನಾ ವೈರಾಣುವಿನ ಉಗಮ ಬಿಂದು ವುಹಾನ್ ನಗರಿ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿದ್ದು, ಅಲ್ಲಿ ಕಟ್ಟಕಡೆಯ ಸೋಂಕಿನ ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಪ್ರಪಂಚದ 250ಕ್ಕೂ ಹೆಚ್ಚು ದೇಶಗಳು .ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಕಂಗೆಟ್ಟಿವೆ. ವಿಶ್ವದಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2.10 ಲಕ್ಷ ದಾಟಿರುವುದು ಕಳವಳಕಾರಿ. ಅಲ್ಲದೆ, ಸೋಂಕಿರ ಸಂಖ್ಯೆ 30 ಲಕ್ಷ ದಾಟುವ ಆತಂಕವಿದೆ. ಇವೆಲ್ಲದರ ನಡುವೆ ಸ್ವಲ್ಪ ಸಮಾಧಾನಕರ ಸಂಗತಿ ಎಂದರೆ ಈತನಕ ಸುಮಾರು 7.80 ಲಕ್ಷ ಜನರು ರೋಗದಿಂದ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈಗಾಗಲೇ 55,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಯುರೋಪ್ ಖಂಡದಲ್ಲಿಯೂ ರಣಕೇಕೆ ಮುಂದುವರಿಸಿವೆ. ಇತರ ದೇಶಗಳು ಕೂಡ ವೈರಸ್ ದಾಳಿಯಿಂದ ನಲುಗಿವೆ.

ಸಾವಿನ ಸಂಖ್ಯೆಯಲ್ಲಿ ಅನುಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದ ಇಟಲಿ, ಸ್ಪೇನ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮತ್ತೆ ತೀವ್ರಗೊಂಡಿದ್ದು, ಈ ದೇಶಗಳಲ್ಲಿ ಈವರೆಗೆ ಎರಡು ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Facebook Comments

Sri Raghav

Admin