ಚೀನಾ ಸೇನೆಯಿಂದ ಐವರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

ಇಟನಗರ, ಸೆ.5- ಅರುಣಾಚಾಲ ಪ್ರದೇಶ ರಾಜ್ಯದ ಊಪರ್ ಸೂಬನ್‍ಸೀರಿ ಜಿಲ್ಲೆಯ ಗಡಿಯಲ್ಲಿ ಐದು ಮಂದಿಯನ್ನು ಚೀನಾ ಸೇನೆ ಅಪಹರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ  ನಾಚೊ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ಹಾಗೂ ಇತರೆ ಪದಾರ್ಥಗಳನ್ನು ಶೇಖರಿಸುತ್ತಿದ್ದ ತಂಡದ ಮೇಲೆ ಚೀನಾದ ಯೋಧರು ದಾಳಿ ಮಾಡಿ ಐವರನ್ನು ಹೊತೊಯ್ದಿದ್ದಾರೆ ಎಂದು ಅಲ್ಲಿಂದ ತಪ್ಪಿಸಿಕೊಂಡು ಬಂದ ಇಬ್ಬರು ತಿಳಿಸಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆ ಪೊಲೀಸರಿಗೂ ನಾವು ತಿಳಿಸಿದೆವು. ಅಲ್ಲಿಗೆ ಹೋಗಿ ನೋಡಿದಾಗ ಚೀನಾದ ಯಾವುದೇ ಸೈನಿಕರು ಕಾಣಲಿಲ್ಲ. ಗಡಿಯವರೆಗೂ ಹೋಗಿ ನೋಡಿದಾಗ ಚೀನಿ ಸೈನಿಕರು ಕೂಡ ಕಾಣಿಸಲಿಲ್ಲ ಎಂದು ಹೇಳಲಾಗಿದೆ.

ಆದರೆ, ಇದರ ಬಗ್ಗೆ ನಮಗೆ ಖಚಿತ ಮಾಹಿತಿ ಇದ್ದು, ಕೇಂದ್ರ ವಿದೇಶ ಇಲಾಖೆಗೆ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಈ ಕುರಿತು ತಿಳಿಸಿದ್ದೇವೆ ಎಂದು ಎಸ್‍ಪಿ ತರೂ ತಿಳಿಸಿದ್ದಾರೆ.

Facebook Comments