ನರಿಬುದ್ದಿ ಚೀನಾದಿಂದ ಕೊರೊನಾ ಲಸಿಕೆ ಫಾರ್ಮುಲಾ ಹ್ಯಾಕ್ : ಅಮೆರಿಕ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.22- ಕೊರೊನಾ ವೈರಸ್ ಸೃಷ್ಟಿಕರ್ತ ಚೀನಾ ಮತ್ತೆ ತನ್ನ ನರಿಬುದ್ದಿ ಮುಂದುವರೆಸಿದ್ದು, ಇತರ ರಾಷ್ಟ್ರಗಳು ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಮದ್ದಿನ ಪಾರ್ಮುಲವನ್ನು ಕದಿಯಲು ಮುಂದಾಗಿದೆ.

ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆಯ ಫಾರ್ಮುಲವನ್ನು ಹ್ಯಾಕರ್ಸ್‍ಗಳ ಮೂಲಕ ಹ್ಯಾಕ್ ಮಾಡಿ ಸಾವಿರಾರು ಕೋಟಿ ಮೌಲ್ಯದ ಜ್ಞಾನಸಂಪತ್ತನ್ನು ಕಳವು ಮಾಡಿ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕೊರೊನಾ ಲಸಿಕೆ ಕಂಡುಹಿಡಿಯಲು ಚೀನಾದ ಎರಡು ಸಂಸ್ಥೆಗಳು ಸಂಶೋಧನೆ ನಡೆಸುತ್ತಿದ್ದರೂ ಅಲ್ಲಿನ ಸರ್ಕಾರ ಖಾಸಗಿ ಹ್ಯಾಕರ್ಸ್‍ಗಳ ಮೂಲಕ ಅಮೆರಿಕದ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಔಷಧಿಯ ಫಾರ್ಮುಲವನ್ನು ಹ್ಯಾಕ್ ಮಾಡಿ ಚೀನಾಗೆ ಹಸ್ತಾಂತರಿಸುತ್ತಿದ್ದಾರೆ.

ಬಯೋಟೆಕ್ ಮತ್ತು ಡಯಾಗ್ನಸ್ಟಿಕ್ ಸಂಸ್ಥೆಗಳ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿ ಕೊರೊನಾ ವೈರಸ್ ಲಸಿಕೆಯ ಫಾರ್ಮುಲವನ್ನು ಕದಿಯಲಾಗುತ್ತಿದೆ.

ಚೀನಾದ ಈ ನರಿಬುದ್ದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin