1,100 ಕೋಟಿ ರೂ.ಗಳ ಅಕ್ರಮ ಗ್ಯಾಂಬ್ಲಿಂಗ್ ಜಾಲ ಪತ್ತೆ, ಚೀನಿ ಪ್ರಜೆ ಸೇರಿ ನಾಲ್ವರ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್/ನವದೆಹಲಿ, ಆ.14-ಭಾರತದ ವಿವಿಧೆಡೆ ಚೀನಾದ ನಕಲಿ ಕಂಪನಿಗಳ ಅಕ್ರಮ ಅವ್ಯವಹಾರಗಳು ಬೆಳಕಿಗೆ ಬರುತ್ತಿರುವಾಗಲೇ ಹೈದರಾಬಾದ್ ಮತ್ತು ದೆಹಲಿಯಲ್ಲಿ 1,100 ಕೋಟಿ ರೂ.ಗಳ ಗ್ಯಾಂಬ್ಲಿಂಗ್ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಚೀನಿ ಪ್ರಜೆ ಸೇರಿದಂತೆ ನಾಲ್ವರನ್ನು ಬಂಸಲಾಗಿದೆ.

ಚೀನಾ ಮೂಲದ ಕಂಪನಿ ಮುತ್ತಿನನಗರಿ ಹೈದರಾಬಾದ್ ಮತ್ತು ರಾಜಧಾನಿ ದೆಹಲಿಯಲ್ಲಿ ಕೋಟ್ಯಂತರ ರೂ.ಗಳ ಅಕ್ರಮ ಆನ್‍ಲೈನ್ ಗ್ಯಾಂಬ್ಲಿಂಗ್‍ನ ವ್ಯವಸ್ಥಿತ ದಂಧೆ ನಡೆಸುತ್ತಿತ್ತು.

ಈ ಸಂಬಂಧ ಹೈದರಾಬಾದ್ ಪೊಲೀಸರನ್ನು ಒಳಗೊಂಡ ಜಂಟಿ ತಂಡ ದೆಹಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚೀನಿ ಪ್ರಜೆ ಮತ್ತು ಆತನ ಮೂವರು ಸಹಚರರನ್ನು ಬಂಸಿದೆ. ಆರೋಪಿಗಳನ್ನು ವಿಚಾರಣೆಗಾಗಿ ಹೈದರಾಬಾದ್‍ಗೆ ಕರೆತರಲಾಗದೆ.

ಅವ್ಯವಹಾರ ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧ ಆದಾಯ ತೆರಿಗೆ ಅಕಾರಿಗಳು ದೆಹಲಿ, ಗುರುಗ್ರಾಮ ಮತ್ತು ನೊಯ್ಡಾ ನಗರಗಳಲ್ಲಿ ಚೀನಾದ ಕಂಪನಿಗಳು ಮತ್ತು ಚೀನಿ ಪ್ರಜೆಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಭಾರೀ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿದ ಬೆನ್ನಲ್ಲೇ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೀಜಿಂಗ್ ಟಿ ಪವರ್ ಕಂಪನಿ ಅಡಿಯಲ್ಲಿ ವಿವಿಧ ಸಂಸ್ಥೆಗಳು ಹೈದರಾಬಾದ್, ದೆಹಲಿ ಸೇರಿದಂತೆ ಕೆಲವೆಡ ಆನ್‍ಲೈನ್ ಗ್ಯಾಂಬ್ಲಿಂಗ್ ದಂಧೆಗಳನ್ನು ನಡೆಸುತ್ತಿದ್ದವು ಎಂದು ಉನ್ನತ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಿ ಪ್ರಜೆ ಮತ್ತು ಆತನ ಭಾರತೀಯ ಸಹಚರರ ಬಂಧನದಿಂದ 1,100 ಕೋಟಿ ರೂ.ಗಳ ಅಕ್ರಮ ಗ್ಯಾಂಬ್ಲಿಂಗ್ ದಂಧೆ ಬೆಳಕಿಗೆ ಬಂದಿದೆ. ಕೊರೊನಾ ವೈರಸ್ ಹಾವಳಿಯಿಂದ ಜಾರಿಯಲ್ಲಿದ್ದ ಲಾಕ್‍ಡೌನ್ ಅವಯಲ್ಲಿ ಈ ದಂಧೆ ಮತ್ತು ಅಕ್ರಮ ವ್ಯವಹಾರಗಳು ನಡೆದಿವೆ.

ಬಂತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ಭಾರೀ ಅಕ್ರಮ-ಅವ್ಯವಹಾರಗಳು ಪತ್ತೆಯಾಗುವ ಸಾಧ್ಯತೆ ಇದೆ. ಎಂದು ಹಿರಿಯ ಅಕಾರಿ ತಿಳಿಸಿದ್ಧಾರೆ

Facebook Comments

Sri Raghav

Admin