ಕೊರೊನಾ ನಿಯಂತ್ರಣಕ್ಕೆ ದೊಣ್ಣೆ ಹಿಡಿದ ಗ್ರಾಮಸ್ಥರು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾವೇರಿ, ಜು.6- ಮಹಾಮಾರಿ ಕೊರೊನಾ ರಾಜ್ಯದ ಮೂಲೆ ಮೂಲೆಗೂ ಹಬ್ಬುತ್ತಿದ್ದು, ಸೋಂಕಿನಿಂದ ದೂರವಿರಲು ಹಿರೆಕೆರೂರು ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಸ್ವಯಂಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ.

ನಮ್ಮ ಗ್ರಾಮದಲ್ಲಿ ಯಾವುದೇ ಸೋಂಕಿಲ್ಲ. ಬೇರೆ ಊರಿನವರು ಬಂದು ಸೋಂಕು ಹಬ್ಬಿಸುವುದು ಬೇಡ ಎಂದು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಕಾವಲು ಕಾಯುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಊರುಗಳಿಂದ ಯಾರೂ ಬರುವಂತಿಲ್ಲ, ಯಾರೂ ಹೊರಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.

ಮನೆಗೆ ಒಬ್ಬೊಬ್ಬರು ಇಂತಿಷ್ಟು ಗಂಟೆಗಳ ಲೆಕ್ಕದಲ್ಲಿ ಊರಿನ ಮುಖ್ಯದ್ವಾರದ ಬಗ್ಗೆ ಕಾವಲು ಕಾಯುತ್ತಿದ್ದಾರೆ. ಯಾರಾದರೂ ಬಂದರೆ ಅವರಿಗೆ ಕೊರೊನಾ ಜಾಗೃತಿ ಮೂಡಿಸಿ ವಾಪಸ್ ಕಳುಹಿಸುತ್ತಿದ್ದಾರೆ.

Facebook Comments