ಎಸ್.ಪಿ.ಬಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಚಿನ್ನೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25- ಅದ್ವಿತೀಯ ಗಾನ ಸುಧೆಯಲ್ಲಿ ಎಲ್ಲರನ್ನೂ ಮೈ ಮರೆಸುವಂತಹ ಮೃದು ಕಂಠದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವುದು ಆಘಾತ ತಂದಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಎಸ್‍ಪಿಬಿ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬ ಸುದ್ದಿ ಹಲವು ದಿನಗಳ ಹಿಂದೆ ಬಂದಿತ್ತು. ಆದರೆ, ವಿಯ ಆಟಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ.

ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಮತ್ತು ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ನಾನು ನಿರ್ಮಿಸಿದ ಅನೇಕ ಚಿತ್ರಗಳಲ್ಲಿ ಅವರ ಗಾಯನ ಭಾರೀ ಯಶಸ್ಸು ಕಂಡಿದೆ. ಇದಲ್ಲದೆ ಡಾ.ರಾಜ್‍ಕುಮಾರ್ ಅವರ ಜತೆಯಲ್ಲಿನ ಒಡನಾಟದಲ್ಲಿ ಬಾಲಸುಬ್ರಹ್ಮಣ್ಯಂ ಅವರು ಹಲವು ಆದರ್ಶ ಗುಣಗಳನ್ನು ನಾನು ಕಂಡಿದ್ದೇನೆ.

ಸರಳತೆ ಹಾಗೂ ಮೇರು ವ್ಯಕ್ತಿತ್ವದ ಎಸ್‍ಪಿಬಿ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಸಂತಾಪದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin