ಚಿಂತಾಮಣಿ ತಾಲೂಕಿನ ಕೊಡದವಾಡಿಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Blst--01

ಚಿಂತಾಮಣಿ, ಜೂ.20-ಸ್ಫೋಟಕ ವಸ್ತು ಪತ್ತೆಯಾಗಿ ಜನರು ಆತಂಕಗೊಂಡಿದ್ದರಿಂದ ತಾಲೂಕಿನ ಕೊಡದವಾಡಿ ಗ್ರಾಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‍ರೆಡ್ಡಿ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಕೊಡದವಾಡಿ ಗ್ರಾಮದ ಅಂಗಡಿಯೊಂದರ ಬಳಿ ಸಿಕ್ಕಿದ ಸ್ಫೋಟಕ ವಸ್ತುಗಳು ಮತ್ತು ಅಲ್ಲಿ ಸಿಕ್ಕ ಚೀಟಿಯಲ್ಲಿ ಬರೆದಿರುವ ಹಲವರು ಹೆಸರುಗಳು, ಸ್ಫೋಟಕಗಳನ್ನು ಇಟ್ಟಿರುವ ಸ್ಥಳಗಳ ಬಗ್ಗೆ ಹಾಗೂ ಹಣದ ಬಗ್ಗೆ ನಮೂದಿಸಿದ ಹಿನ್ನೆಲೆ ಯಲ್ಲಿ ಗ್ರಾಮದಲ್ಲಿ ಬೆಳಗ್ಗೆ ತೀವ್ರ ಅಂತಕದ ವತಾವರಣ ನಿರ್ಮಾವಾಗಿತ್ತು.

ಗ್ರಾಮದ ಕೆ.ಎನ್.ಸುರೇಶ್ ಎಂಬುವರು ಗ್ರಾಮದ ಗೇಟ್ ಬಳಿ ಬೂಸಾ ಅಂಗಡಿ ಹಾಗು ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ನಿನ್ನೆ ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯಲು ಹೋದಾಗ ಡೋರ್ ಷಟರ್ ಕೆಳಭಾಗದಲ್ಲಿ ಒಂದು ಬಿಳಿ ಹಾಳೆಯ ಚೀಟಿ ಇಟ್ಟಿರುವುದು ಕಂಡು ಬಂದಿದ್ದು ಅದರಲ್ಲಿ ಬಾಂಬುಗಳು ಇಟ್ಟಿರುವ ಬಗ್ಗೆ ಹಣದ ಬಗ್ಗೆ ಪ್ರಸ್ಥಾಪ ಮಾಡಿರುವುದು ಮತ್ತಷ್ಟು ಅಂತಕಕ್ಕೆ ಕಾರಣವಾಗಿತ್ತು.

ಅಂಗಡಿಯ ಮುಂಭಾಗದ ಜಗಲಿ ಕೆಳಭಾಗದಲ್ಲಿ ಬಿಸಾಡಿರುವ ಕಾರ್ಟನ್ ಬಾಕ್ಸ್‍ನಲ್ಲಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಹ್ಯಾಂಡ್ ಕವರ್ ಪತ್ತೆಯಾಗಿದೆ. ಕವರನ್ನು ತೆಗೆದು ನೋಡಿದಾಗ ಅದರಲ್ಲಿ ಸ್ಟೋಟಕಕ್ಕೆ ಬಳಸುವ ಜೆಲಿ ಟಿನ್ ಕಡ್ಡಿಗಳು, ಕೇಪುಗಳು, ತೆಲುಗಿನಲ್ಲಿ ಕನ್ನಡದಲ್ಲಿ ಬರೆದಿರುವ ಚೀಟಿ ಗಳು, 1000 ರೂ ಹಣ, ಚೀಟಿಗಳಲ್ಲಿ 37 ಜನರ ಹೆಸರುಗಳು, ಬಾಂಬುಗಳ ಬಗ್ಗೆ ವಿವರಗಳು ಬರೆದಿರುವುದು ಕಂಡುಬಂದಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್‍ಪಿ ನಾಗೇಶ್, ಸಿಪಿಐ ಬೈರಪ್ಪ ಮತ್ತು ತಂಡ ಸ್ಥಳಕ್ಕೆ ಬೇಟಿ ನೀಡಿ ಕಾರ್ಟನ್ ಬಾಕ್ಸ್‍ನಲ್ಲಿದ್ದ ಜಿಲೆಟಿನ್ ಕಡ್ಡಿ ಗಳು ಮತ್ತು ಚೀಟಿಯನ್ನು ವಶಪಡಿಸಿಕೊಂಡು ಅಂಗಡಿಯ ಮಾಲೀಕ ಸುರೇಶ್ ರವರಿಂದ ದೂರು ಪಡೆದುಕೊಂಡು ಪ್ರಕರಣ ದಾಖಲು ಮಾಡಿದ್ದಾರೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕರೆಡ್ಡಿ ಬೇಟಿ ಮಾಡಿ ಸ್ಪೋಟಕ ವಸ್ತುಗಳು ಸಿಕ್ಕಿದ ಸ್ಥಳವನ್ನು ವೀಕ್ಷಿಸಿದ ನಂತರ ಅಂಗಡಿಯ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ನಂತರ ಶ್ವಾನ ದಳವನ್ನು ಕರೆಸಿ ತಪಾಸಣೆ ಸಹ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ತಿಕರೆಡ್ಡಿ ಈಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿಯೂ ಸಿಕ್ಕಿರುವ ಚೀಟಿಗಳಲ್ಲಿ ಹಲವರು ಹೆಸರು ನಮೂದಾಗಿದ್ದು ಅವರ ವಿಚಾರಣೆ ಮಾಡುವುದರ ಜೊತೆಗೆ ಗ್ರಾಮದ ಜನತೆ ಅತಂಕಗೊಳ್ಳದಂತೆ ತಿಳಿಸಿದರು. ಡಿಎಅರ್ ವ್ಯಾನ್ ಬಂದೋಬಸ್ತ್ ಸಹ ಏರ್ಪಡಿಸಿರುವುದಾಗಿ ತಿಳಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕರೆ ಪೊಲೀಸ್ ರಿಗೆ ತಿಳಿಸುವಂತೆ ಗ್ರಾಮಸ್ಥರನ್ನು ಕೋರಿದರು.

Facebook Comments

Sri Raghav

Admin